ಬಿ.ಎ.ಎಸ್.ಎಫ್ ಸಂಸ್ಥೆಯಿಂದ ಶಾಲೆಗೆ 3.50 ಲಕ್ಷ ರೂ. ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಮಂಗಳೂರು: ಇಂದಿನ‌ ವಿದ್ಯಾರ್ಥಿಗಳು ಭಾರತ ದೇಶದ ಭವಿಷ್ಯ ರೂಪಿಸುವವರಾಗಿದ್ದಾರೆ, ಕಷ್ಟ ಪರಿಶ್ರಮ ಪಟ್ಟರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಬಿ.ಎ.ಎಸ್.ಎಪ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಪ್ರಭಂದಕರಾದ ಸಂತೋಷ್ ಪೈ ನುಡಿದರು.

ಮಧ್ಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಬಿ.ಎ.ಎಸ್.ಎಪ್ ಸಂಸ್ಥೆಯ ವತಿಯಿಂದ ಸುಮಾರು 3-50 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಿದ್ದು ಅದರ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ನಮ್ಮ ಸಂಸ್ಥೆಯು ಅದ್ಯತೆ ನೆಲೆಯಲ್ಲಿ ಪರಿಸರದ ಸುತ್ತಲಿನ ಗ್ರಾಮಗಳ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಅದ್ಯತೆ ನೀಡಲಾಗಿದೆ ಗ್ರಾಮೀಣ ಭಾಗದ ಸರಕಾರಿ ಶಾಲೆಯು ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಶಾಲೆಯಾಗಿರುವುದು ಶ್ಲಾಘನೀಯ ಎಂದರು.

ಜೆಸಿಐ ವಲಯಾ 15 ರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ, ವಲಯಾ ಉಪಾಧ್ಯಕ್ಷ ಜೀತೇಶ್ ಪಿರೇರಾ, ಮಧ್ಯ ಶಾಲೆಯ ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಕೋಶಾಧಿಕಾರಿ ವಿಠಲ‌ ಶೆಟ್ಟಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಪ್ರಪುಲ್ಲ ಪಂಜ, ಬಿ.ಎ.ಎಸ್.ಎಪ್ ಸಂಸ್ಥೆಯ ಪ್ರಭಂದಕರಾದ ಪ್ರವೀಣ್ ಶೆಟ್ಟಿ, ಜೆಸಿಐ ಸುರತ್ಕಲ್ ನ ನಿಕಟಪೂರ್ವಧ್ಯಕ್ಷ ಶ್ರಿಶೈ ಶೆಟ್ಟಿ, ಪೂರ್ವಧ್ಯಕ್ಷರಾದ ಎಂ‌.ಜಿ.ರಾಮಚಂದ್ರರಾವ್, ಗುಣವತಿ ರಮೇಶ್, ಜ್ಯೋತಿ ಪಿ ಶೆಟ್ಟಿ,ಅಶ್ವಿನಿ ಐತಾಳ್, ಉಪಾಧ್ಯಕ್ಷೆ ಸವಿತಾ ಶೆಟ್ಟಿ, ಜ್ಯೋತಿ ಜೆ ಶೆಟ್ಟಿ ಜತೆ ಕಾರ್ಯದರ್ಶಿ ಪ್ರಾರ್ಥನಾ, ಶಶಿಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಸುರತ್ಕಲ್ ಅಧ್ಯಕ್ಷ ಅಶೋಕ್ ಎನ್ ವಹಿಸಿದ್ದರು ಶಾಲೆಯ ಶಿಕ್ಷಕಿ ಶೈಲಾ ಧನ್ಯವಾದ ಸಮರ್ಪಿಸಿದರು.

error: Content is protected !!