ಬೆಂಗಳೂರು: ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ ಅವರನ್ನು ಇಂದು ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಸದಾಶಿವನಗರದ ನಿವಾಸದಲ್ಲಿ ಭೇಟಿಯಾಗಿ ಅರೋಗ್ಯ ವಿಚಾರಿಸಿದರು.


ಮಂಜುನಾಥ ಭಂಡಾರಿ ಅವರ ಕುಟುಂಬ ಸದಸ್ಯರ ಬಳಿ ಸಮಾಲೋಚನೆ ನಡೆಸಿದ ಹೊರಟ್ಟಿ ಅವರು ಭಂಡಾರಿ ಅವರನ್ನು ಶೀಘ್ರ ಗುಣಮುಖರಾಗಿ ಬನ್ನಿ ಎಂದು ಶುಭ ಹಾರೈಸಿ ತೆರಳಿದರು.