ಕಿರುತೆರೆ ನಟಿಯ ಅಶ್ಲೀಲ ವಿಡಿಯೋ ರೆಕಾರ್ಡ್‌ ಮಾಡಿ ಅಪರಿಚಿತ ವ್ಯಕ್ತಿಯಿಂದ ಬ್ಲ್ಯಾಕ್‌ಮೇಲ್‌!!

ಬೆಂಗಳೂರು: ಕಿರುತೆರೆ ನಟಿ ಹಾಗೂ ರಿಯಾಲಿಟಿ ಶೋವೊಂದರ ಮಹಿಳಾ ಸ್ಪರ್ಧಿಯ ಅಶ್ಲೀಲ ವಿಡಿಯೋ ರೆಕಾರ್ಡ್‌ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಆಕೆಗೆ ಕರೆ ಮಾಡಿ ಬ್ಲ್ಯಾಕ್‌ಮೇಲ್‌ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ನಟಿ ನೀಡಿದ ದೂರಿನ ಮೇರೆಗೆ ನಗರ ಸೈಬರ್‌ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಸೆಲೆಬ್ರಿಟಿ ಕ್ರಿಕೆಟ್‌ ಲಿಗ್‌ ಟೂರ್ನಿ ನಡೆಯುತ್ತಿದೆ. ಅದರ ಅಂಗವಾಗಿ ಫೆ.6, 7 ಮತ್ತು 8 ರಂದು ಕಾರ್ಯಾಕ್ರಮ ಇದ್ದು, ಫೆ.7ರಂದು ದೂರುದಾರ ಮಹಿಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಂತರ ಕ್ರೀಡಾಂಗಣದಲ್ಲಿರುವ ಮಹಿಳಾ ಶೌಚಾಲಯಕ್ಕೆ ಹೋದಾಗ, ಅಪರಿಚಿತ ವ್ಯಕ್ತಿ ತನ್ನ ವಿಡಿಯೋ ಮಾಡಿದ್ದಾನೆ. ಕೆಲ ದಿನಗಳ ಬಳಿಕ ಸ್ವಾನ್‌3704722 ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ತನ್ನ ಸ್ನೇಹಿತೆ ಖಾತೆಗೆ ಕೆಲ ವಿಡಿಯೋಗಳನ್ನು ಕಳುಹಿಸಿದ್ದಾನೆ.

ಈ ವಿಡಿಯೋಗಳನ್ನು ಬಹಿರಂಗ ಪಡಿಸದಿರಲು ಹಣ ಕೊಡಬೇಕು ಎಂದು ನಾಲ್ಕೈದು ಬಾರಿ ವಿಡಿಯೋ ಕಾಲ್‌ ಮಾಡಿ ಆಕೆಗೂ ಮತ್ತು ತನಗೂ ಬೇಡಿಕೆ ಇಟ್ಟಿದ್ದಾನೆ. ಒಂದು ವೇಳೆ ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ವೈರಲ್‌ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ನಟಿ ದೂರಿನಲ್ಲಿ ಆರೋಪಿಸಿದ್ದಾರೆ.

error: Content is protected !!