ಮಂಗಳೂರು: V7 ಫೌಂಡೇಶನ್ ಉದ್ದಬೆಟ್ಟು, ಮಲ್ಲೂರು ಇದರ ವತಿಯಿಂದ ‘ಸಮಸ್ತ ಆದರ್ಶ ಹಾದಿಯ ನೆರಳು ವೃಕ್ಷಗಳು’ ಎಂಬ ಬೃಹತ್ ಗ್ರಂಥವನ್ನು ರಚಿಸಿ ಸಮಸ್ತದ ನೂರನೇ ವಾರ್ಷಿಕ ಕಾರ್ಯಕ್ರಮದಲ್ಲಿ ಬಹುಮಾನ್ಯ ಜಿಫ್ರೀ ಮುತ್ತುಕೋಯ ತಂಞಳ್ ದಿವ್ಯ ಹಸ್ತದಿಂದ ಬಿಡುಗಡೆಗೊಳಿಸಿ ಊರಿಗೆ ಕೀರ್ತಿ ತಂದ ಶವಿಲ್ ಉದ್ದಬೆಟ್ಟು ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.


ಇದೇ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ಧ ಸಯ್ಯದ್ ಹಸನ್ ಹೈದ್ರೋಸ್ ಜುಮಾ ಮಸೀದಿ ಉದ್ದಬೆಟ್ಟು ಇದರ ನೂತನ ಅಧ್ಯಕ್ಷರಾದ ಯೂನುಸ್ ಉದ್ದಬೆಟ್ಟು ರವರನ್ನು ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳ ಸಮ್ಮುಖದಲ್ಲಿ ಸಂಸ್ಥೆಯ ಅಧಿಕೃತ ಲೋಗೋ ವನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಸಯ್ಯದ್ ಹಸನ್ ಹೈದ್ರೋಸ್ ಜುಮಾ ಮಸೀದಿ ಉದ್ದಬೆಟ್ಟು ಅಧ್ಯಕ್ಷರಾದ ಯೂನುಸ್ ಉದ್ದಬೆಟ್ಟು, ಮಾಜಿ ಅಧ್ಯಕ್ಷರಾದ ಹನೀಫ್ ಬೊಲ್ಲಂಕಿಣಿ, ಉಪಾಧ್ಯಕ್ಷರಾದ ಇಸ್ಮಾಯಿಲ್ ಬದ್ರಿಯಾನಗರ, ಪ್ರಧಾನ ಕಾರ್ಯದರ್ಶಿ ನಸ್ಫಾನ್ ಉದ್ದಬೆಟ್ಟು, ಜೊತೆ ಕಾರ್ಯದರ್ಶಿ ಫೈಝಲ್ ಉದ್ದಬೆಟ್ಟು, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ಲಾ ಬೊಲ್ಲಂಕಿಣಿ, ಎಸ್ಕೆ ಎಸ್ ಎಸ್ ಎಫ್ ಉದ್ದಬೆಟ್ಟು ಶಾಖೆ ಅಧ್ಯಕ್ಷರಾದ ಸಿರಾಜ್ ಉದ್ದಬೆಟ್ಟು, ಇಕ್ಬಾಲ್ ಬೆಂಗಳೂರು ಹಾಗೂ V7 ಫೌಂಡೇಶನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.