ಕಾರ್ಕಳ: ಬೈಕ್ ಸ್ಕಿಡ್ ಆಗಿ ಸಹಸವಾರೆ ಸಾ*ವು

ಕಾರ್ಕಳ: ಬೈಕ್ ಸ್ಕಿಡ್ ಆಗಿ ರಸ್ತೆಗೆಸೆಯಲ್ಪಟ್ಟ ಸಹಸವಾರೆಯೊಬ್ಬರು ಮೃತಪಟ್ಟ ಘಟನೆ ಕುಕ್ಕುಂದೂರು ಗ್ರಾಮದ ಜಯಂತಿನಗರ ಹಿಂದೂ ರುದ್ರಭೂಮಿಯ ಬಳಿ ಸೋಮವಾರ(ಫೆ.16) ಸಂಜೆ ವೇಳೆ ನಡೆದಿದೆ ಎನ್ನಲಾಗಿದೆ.

ಕುಕ್ಕಂದೂರು ಪರಪು ನಾಗನಕಟ್ಟೆ ಬಳಿ ನಿವಾಸಿ ಜಯಲಕ್ಷ್ಮಿ ಪ್ರಭು ಮೃತ ಮಹಿಳೆ.

ಇವರು ಕೃಷ್ಣದಾಸ ಮಲ್ಯ ಎಂಬವರ ಬೈಕ್‌ನಲ್ಲಿ ಸರ್ವಜ್ಞ ಸರ್ಕಲ್‌ನಿಂದ ನಕ್ರೆ ಕಡೆಗೆ ಹೋಗುತ್ತಿದ್ದಾಗ ಬೈಕ್ ಸ್ಕಿಡ್ ರಸ್ತೆಗೆ ಬಿದ್ದಿದ್ದಾರೆ, ಈ ವೇಳೆ ಗಂಭೀರವಾಗಿ ಗಾಯಗೊಂಡ ಜಯಲಕ್ಷ್ಮೀ ಅವರು ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!