ಕನ್ನಡದ ಖ್ಯಾತ ಕಿರುತೆರೆ ನಟಿ ‘ರಶ್ಮಿ ಲೀಲಾ’ ಇನ್ನಿಲ್ಲ!

ಬೆಂಗಳೂರು: ಕನ್ನಡದ ಕಿರುತೆರೆ ನಟಿ ರಶ್ಮಿ ಲೀಲಾ ಕೆಲ ದಿನಗಳಿಂದ ಗಂಭೀರ ಶ್ವಾಸಕೋಶದ ಕಾಯಿಲೆಯಾದ ಪಲ್ಮನರಿ ಫೈಬ್ರೋಸಿಸ್‌ನಿಂದ ಬಳಲುತ್ತಿದ್ದ ಅವರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು, ಆದರೆ ಸೋಮವಾರ(ಫೆ.16) ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಸೂಕ್ತ ದಾನಿಗಳು ಬಂದ ಹಿನ್ನಲೆಯಲ್ಲಿ ಶ್ವಾಸಕೋಶದ ಟ್ರಾನ್ಸ್ ಪ್ಲಾಂಟ್ ಕೂಡ ಮಾಡಲಾಗಿತ್ತು, ಆ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿತ್ತು ಎನ್ನಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸುದ್ದಿಯನ್ನು ಅವರ ಪತಿ ಸಾರಕ್ಕಿ ಮಂಜು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇಂದು ಬೆಳಗ್ಗೆ ಒಂದು ಪೋಸ್ಟ್ ಮಾಡಿದ್ದ ಸಾರಕ್ಕಿ ಮಂಜು, ಹೃದಯದ ಬಡಿತ ತೀವ್ರ ಇಳಿಮುಖ ಆಗುತ್ತಿದೆ. ಕೊನೆಯ ಬಾರಿಗೆ ಒಂದು ಸಲ, ಒಂದೇ ಒಂದು ಸಲ ಈ ನನ್ನ ಜೀವ ಉಳಿದು ಬಿಡಲಿ. ಉಳಿಸಿಕೊಡಲೆಂದು ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿ ಬಿಡಿ ಎಂದು ಪೋಸ್ಟ್ ಹಾಕಿದ್ದರು.

ಬಳಿಕ ನಮ್ಮ ಪ್ರಾಣ ಹೊರಟು ಹೋಯ್ತು ಎಂದು ಮತ್ತೊಂದು ಪೋಸ್ಟ್ ಹಾಕಿ ರಶ್ಮಿ ಲೀಲಾ ನಿಧನದ ವಿಚಾರ ತಿಳಿಸಿದ್ದಾರೆ.

error: Content is protected !!