ಮರೋಳಿ: ಶ್ರೀ ಜ್ವಾಲಾ ಮಹಾಮ್ಮಾಯಿ ದೇವಸ್ಥಾನದ ಮೇಲ್ಛಾವಣಿ ಹಾಗೂ ರಸ್ತೆ ಅಭಿವೃದ್ಧಿ ಕಾರ್ಯ ಆರಂಭ

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 37ನೇ ಮರೋಳಿ ವಾರ್ಡಿನ ಶ್ರೀ ಜ್ವಾಲಾ ಮಹಾಮ್ಮಾಯಿ ಕಾಲಭೈರವ ದೇವಸ್ಥಾನದ ಬಳಿ ಮೇಲ್ಛಾವಣಿ ಅಳವಡಿಕೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯು ಶಾಸಕ ವೇದವ್ಯಾಸ್ ಕಾಮತ್‌ರವರ ಉಪಸ್ಥಿತಿಯಲ್ಲಿ ನಡೆಯಿತು.

ನಂತರ ಮಾತನಾಡಿದ ಶಾಸಕರು, ಶ್ರೀ ಜ್ವಾಲಾ ಮಹಾಮ್ಮಾಯಿ ಕಾಲಭೈರವ ದೇವಸ್ಥಾನದ ಜೀರ್ಣೋದ್ದಾರದ ಶುಭ ಸಂದರ್ಭದಲ್ಲಿ ಇಲ್ಲಿಗೊಂದು ಸುಸಜ್ಜಿತ ಒಳ ರಸ್ತೆ ಸಹಿತ ದೇವಸ್ಥಾನದ ಮೇಲ್ಛಾವಣಿಗಾಗಿ ಆಡಳಿತ ಮಂಡಳಿ ಸಹಿತ ಸ್ಥಳೀಯರು ಮನವಿ ಮಾಡಿದ್ದರು. ಅದರಂತೆ ಇದೀಗ ಅಗತ್ಯವಿರುವ ಅನುದಾನವನ್ನು ಹೊಂದಿಸಿಕೊಂಡು ಇದೀಗ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರಾದ ಜಗದೀಶ್ ಶೆಣೈ, ಮಂಡಲದ ಹಿಂದುಳಿದ ವರ್ಗ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕಿರಣ್ ಮರೋಳಿ, ಮಂಡಲದ ಉಪಾಧ್ಯಕ್ಷರಾದ ಅಜಯ್ ಕುಲಶೇಖರ, ರವಿ ರಾಮನಗರ, ಪ್ರದೀಪ್ ಕುಮಾರ್ ಶೆಟ್ಟಿ, ನಿತ್ಯ ಕರುಣ್ ನಾಯಕ್, ಕೃಷ್ಣ ಎಸ್ ಆರ್, ಅರುಣ್ ಶೆಟ್ಟಿ, ಮಾಲತಿ, ಸರಳ, ಅರುಣ್ ಬಜ್ಜೋಡಿ, ಪ್ರಶಾಂತ್ ಶೆಣೈ, ಭೋಜ ಅಮೀನ್, ದೇವಸ್ಥಾನದ ಅಧ್ಯಕ್ಷರಾದ ಸತೀಶ್ ದೇವಾಡಿಗ, ಕಾರ್ಯದರ್ಶಿ ವಾಸುದೇವ್ ದೇವಾಡಿಗ, ರುಕ್ಮಯ ದೇವಾಡಿಗ, ಸುರೇಶ್ ಅಡ್ಡೂರು, ಮೂಲತ್ವ ಫೌಂಡೇಶನ್ ಅಧ್ಯಕ್ಷರಾದ ಪ್ರಕಾಶ್, ತೇಜಸ್ ಸುವರ್ಣ, ಹರಿಣಾಕ್ಷ ಭಂಡಾರಿ, ರಾಜೇಶ್ ಅಲಂಗಾರ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!