ಫೆ.6: ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ ನಟನೆಯ ಸರ್ಕಾರಿ ಶಾಲೆ- ಎಚ್‌ 8 ಸಿನಿಮಾ ತೆರೆಗೆ

ಬೆಂಗಳೂರು: ಸಸ್ಪೆನ್ಸ್‌, ಥ್ರಿಲ್ಲರ್‌ ಜಾನರ್‌ ಹೊಂದಿರುವ “ಸರ್ಕಾರಿ ಶಾಲೆ- ಎಚ್‌ 8” ಚಿತ್ರ ಫೆಬ್ರವರಿ 6ರಂದು ಬಿಡುಗಡೆಯಾಗುತ್ತಿದೆ. ಬಿಗ್‌ ಬಾಸ್‌ ವಿಜೇತ ಗಿಲ್ಲಿ ನಟ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಈ ಚಿತ್ರಕ್ಕೆ ಗುಣ ಹರಿಯಬ್ಬೆ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಗಿರಿಚಂದ್ರ ಪ್ರೊಡಕ್ಷನ್ಸ್‌ ಮೂಲಕ ತೇಜಸ್ವಿನಿ ಎಸ್‌. ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. “ಸರ್ಕಾರಿ ಶಾಲೆ- ಎಚ್‌ 8” ಚಿತ್ರದ ಕಥೆ ಒಂದು ವಿಗ್ರಹದ ಸುತ್ತ ನಡೆಯುತ್ತದೆ. ಈ ಚಿತ್ರಕ್ಕೆ ಬೆಂಗಳೂರು, ಚಿತ್ರದುರ್ಗ, ಶಿರಾ, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ವಿಜೇತ್‌ ಮಂಜಯ್ಯ ಅವರ ಸಂಗೀತ ಸಂಯೋಜನೆಯ 3 ಹಾಡುಗಳು ಈ ಚಿತ್ರದಲ್ಲಿದ್ದು, ನಟ ಶರಣ್‌ ಹಾಗೂ ಮೆಹಬೂಬ್‌ ಸಾಬ್‌ ಒಂದೊಂದು ಹಾಡನ್ನು ಹಾಡಿದ್ದಾರೆ. ನಾಗೇಂದ್ರ ಪ್ರಸಾದ್‌ ಸಾಹಿತ್ಯ ರಚಿಸಿದ್ದಾರೆ. ರವಿ ರಾಮದುರ್ಗ ಹಾಗೂ ವೀನಸ್‌ ಮೂರ್ತಿ ಅವರ ಕ್ಯಾಮೆರಾ ವರ್ಕ್‌, ರವಿತೇಜ ಸಿ.ಹೆಚ್‌. ಅವರ ಸಂಕಲನ ಈ ಚಿತ್ರಕ್ಕಿದೆ.

“ಸರ್ಕಾರಿ ಶಾಲೆ- ಏ 8′ ಚಿತ್ರದಲ್ಲಿ ಗಿಲ್ಲಿ ನಟ, ಗುಣ ಹರಿಯಬ್ಬೆ, ಮೇಘಶ್ರೀ, ಜನಪದ ಕಲಾವಿದ ಮೋಹನ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ. ಉಳಿದಂತೆ ಹಿರಿಯನಟ ರಾಘವೇಂದ್ರ ರಾಜ್‌ಕುಮಾರ್‌, ಸುಚೇಂದ್ರ ಪ್ರಸಾದ್‌, ಜಗಪ್ಪ, ನವಾಜ್‌, ಸುಶ್ಮಿತ ಜಗಪ್ಪ, ಕಡ್ಡಿ ವಿಶ್ವ, ಜೋತಿರಾಜ್‌, ನಮ್ರತಾ ನಟಿಸಿದ್ದಾರೆ.

error: Content is protected !!