ಮಂಗಳೂರು: ಹಿಂದೂ ಸಂಗಮ ಸೂರಿಂಜೆ ವಸತಿ ಕಾರ್ಯಕ್ರಮವು ಫೆ. 08(ಭಾನುವಾರ) ರಂದು ನಡೆಯಲಿದ್ದು, ಸಂಜೆ 3.30 ಗಂಟೆಗೆ ಬೊಳ್ಳಯರು ಕೊರ್ದಬ್ಬು ದೈವಸ್ಥಾನದಿಂದ ಭವ್ಯ ಶೋಭಾಯಾತ್ರೆ ಪ್ರಾರಂಭವಾಗಲಿದೆ.

ಶೋಭಾಯಾತ್ರೆಯ ನಂತರ ಸಂಜೆ 5.00 ಗಂಟೆಗೆ ನಾಯರ್ ಕೋಡಿ ಕುಟುಂಬಿಕರ ಪಟ್ಟ ಸ್ಥಳ, ಕೋಟೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಮಹತ್ವ ಹಾಗೂ ಉದ್ದೇಶಗಳ ಬಗ್ಗೆ ಹಿಂದೂ ಸಂಗಮದ ಪ್ರಚಾರದ ಪ್ರಮುಖರಾದ ಅನೂಪ್ ಸೂರಿಂಜೆ ಅವರು ಮಾಹಿತಿ ನೀಡಿದರು.