ಟಾಟಾ ಮಾಸ್ಟರ್ಸ್‌ ಚೆಸ್‌ ಟೂರ್ನಿ: ಗುಕೇಶ್‌ಗೆ ಗೆಲುವು, ಅರ್ಜುನ್ ಎರಿಗೈಸಿ ಹಿನ್ನಡೆ

ನೆದರ್ಲೆಂಡ್ಸ್‌: ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಪಂದ್ಯಾವಳಿಯ 10ನೇ ಸುತ್ತಿನಲ್ಲಿ ಟರ್ಕಿ ಆಟಗಾರ ಯಾಗಿಜ್ ಕಾನ್ ಎರ್ಡೋಗ್ಮಸ್ ವಿರುದ್ಧ ವಿಶ್ವ ಚಾಂಪಿಯನ್‌ ಭಾರತದ ಡಿ.ಗುಕೇಶ್‌ ಜಯ ಸಾಧಿಸಿದ್ದಾರೆ. ಆದರೆ ಅರ್ಜುನ್‌ ಎರಿಗೈಸಿ, ಜರ್ಮನಿಯ ವಿನ್ಸೆಂಟ್‌ ಕೀಮರ್‌ ವಿರುದ್ಧ ಸೋತಿದ್ದಾರೆ.

ಕೂಟದ ಹಾಲಿ ಚಾಂಪಿಯನ್‌ ಆರ್‌.ಪ್ರಜ್ಞಾನಂದ, ಅಮೆರಿಕದ ಹ್ಯಾನ್ಸ್ ಮೋಕ್ ನೀಮನ್ ವಿರುದ್ಧ ನಡೆದ ಪಂದ್ಯದಲ್ಲಿ ಡ್ರಾ ಆಗಿದೆ. ಭಾರತೀಯರಲ್ಲಿ 5 ಅಂಕ ಗಳಿಸಿರುವ ಗುಕೇಶ್‌ ಸದ್ಯ 3ನೇ ಸ್ಥಾನದಲ್ಲಿದ್ದು, ಇನ್ನೂ 3 ಸುತ್ತುಗಳ ಸ್ಪರ್ಧೆ ನಡೆಯಲಿದೆ.

error: Content is protected !!