ಚಿನ್ನ ಪ್ರಿಯರಿಗೆ ಬಿಗ್‌ ಶಾಕ್‌; ದಾಖಲೆಯ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ…ಹಾಗಾದ್ರೆ ಇಂದಿನ ಬೆಲೆ?!

ಮಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರುತ್ತಲೇ ಹೋಗುತ್ತಿದ್ದು, ಇದೀಗ ಚಿನ್ನ ಪ್ರಿಯರಿಗೆ ಚಿನ್ನದ ಬೆಲೆ ಕಂಡೂ ಆಘಾತವನ್ನೇ ಉಂಟುಮಾಡಿದೆ. ಒಂದೇ ದಿನದ ಅಂತರದಲ್ಲಿ ಸುಮಾರು 1 ಸಾವಿರದಷ್ಟೂ ಚಿನ್ನದ ಬೆಲೆ ಏರಿಕೆಯಾಗಿದೆ. ಅಂದರೆ 16 ಸಾವಿರದ ಗಡಿ ದಾಟಿದೆ.

ಮಂಗಳವಾರ(ಜ.27) ಚಿನ್ನದ ಬೆಲೆ 14,845 ರೂ. ರಲ್ಲಿ ಕೊನೆಗೊಂಡಿತ್ತು. ಬುಧವಾರ(ಜ.28)ದಂದು 15,315 ರೂ. ಇತ್ತು, ಆದರೆ ಇದೀಗ ಸರಿ ಸುಮಾರು 1000 ರೂ. ಗಳಷ್ಟು ಏರಿಕೆಯಾಗಿ ಚಿನ್ನದ ಬೆಲೆ 16,395 ರೂ. ಗೆ ತಲುಪಿದೆ.

ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 17,885(+1,177) ರೂ. ಗೆ ಏರಿಕೆಯಾಗಿದ್ದು. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 16395(+1,080) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 13,414(+883) ರೂ. ಬೆಲೆಗೆ ತಲುಪಿದೆ.

error: Content is protected !!