
ನವದೆಹಲಿ: ಫೆ.7ರಿಂದ ನಡೆಯುವ ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಕ್ರಿಕೆಟ್ ತಂಡವನ್ನು ಕಳುಹಿಸಲು ನಿರಾಕರಿಸಿರುವ ಬಾಂಗ್ಲಾದೇಶ, ಫೆ.2ರಿಂದ 14ರವರೆಗೆ ಭಾರತದಲ್ಲಿ ನಡೆಯುವ ಏಷ್ಯನ್ ರೈಫಲ್ ಆ್ಯಂಡ್ ಪಿಸ್ತೂಲ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ತನ್ನ ಶೂಟರ್‌ಗಳಿಗೆ ಅನುಮತಿ ನೀಡಿದೆ.

ಹೀಗಾಗಿ ದೆಹಲಿಯಲ್ಲಿ ನಡೆಯಲಿರುವ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ಗೆ ಬಾಂಗ್ಲಾ ಶೂಟರ್‌ಗಳು ಭಾರತಕ್ಕೆ ಪ್ರಯಾಣಿಸಲಿದ್ದಾರೆ. 17 ರಾಷ್ಟ್ರಗಳಿಂದ 300 ಶೂಟರ್‌ಗಳು ಪಾಲ್ಗೊಳ್ಳಲಿದ್ದಾರೆ.