ಮಂಗಳೂರಿನಲ್ಲಿ ಬೆಂಗಳೂರಿಗಿಂತಲೂ ಅಧಿಕ ಕಳಪೆ ವಾಯು ಗುಣಮಟ್ಟ ದಾಖಲು

ಮಂಗಳೂರು: ಬೆಂಗಳೂರಿಗಿಂತಲೂ ಅಧಿಕ ಕಳಪೆ AQI(ವಾಯು ಗುಣಮಟ್ಟ ಸೂಚ್ಯಂಕ) ಮಂಗಳೂರಿನಲ್ಲಿ ದಾಖಲಾಗಿದ್ದು, ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ಬೆಂಗಳೂರಿನ ಏರ್ ಕ್ವಾಲಿಟಿ 163 ಇದ್ದು, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಇಂದಿನ ಮಟ್ಟಿಗೆ ವಾಯು ಗುಣಮಟ್ಟ ಚೇತರಿಸಿಕೊಂಡಿದೆ. ಆದರೆ ಮಂಗಳೂರಿನ ವಾಯು ಗುಣಮಟ್ಟ 172 ರಲ್ಲಿ ಇದೆ. ಈ ಕಲುಷಿತ ಗಾಳಿಯಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ವಾಯು ಗುಣಮಟ್ಟ ಸೂಚ್ಯಂಕ

ಬೆಂಗಳೂರು –163
ಮಂಗಳೂರು-172
ಉಡುಪಿ –167
ಮೈಸೂರು –162
ಬೆಳಗಾವಿ – 118
ಕಲಬುರ್ಗಿ-151
ಶಿವಮೊಗ್ಗ – 160
ಬಳ್ಳಾರಿ – 200
ಹುಬ್ಬಳ್ಳಿ- 134
ವಿಜಯಪುರ –150

ಉತ್ತಮ: 0-50
ಮಧ್ಯಮ: 50-100
ಕಳಪೆ: 100-150
ಅನಾರೋಗ್ಯಕರ: 150-200
ಗಂಭೀರ: 200 – 300
ಅಪಾಯಕಾರಿ: 300 -500+

error: Content is protected !!