
ಮುಂಬೈ: ಖ್ಯಾತ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಗಾಯನ ಲೋಕಕ್ಕೆ ಗುಡ್ ಬೈ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅರಿಜಿತ್ ಸಿಂಗ್ ಇಲ್ಲಿಯವರೆಗೆ ಅಭಿಮಾನಿಗಳು ತುಂಬಾ ಸಹಕಾರ ನೀಡಿದ್ದೀರಿ ಇನ್ನು ಮುಂದೆ ಹೊಸ ಹಾಡುಗಳನ್ನು ರೆಕಾರ್ಡ್ ಮಾಡುವುದಿಲ್ಲ ಎಂದಿದ್ದಾರೆ.
ಇನ್ನು ಮುಂದೆ ಗಾಯನ ನಿಲ್ಲಿಸುತ್ತೇನೆ ಎಂದಿರುವ ಅರಿಜಿತ್ ಸಿಂಗ್ ಇದೊಂದು ಮರೆಯಲಾಗದ ಜರ್ನಿ ಎಂದಿದ್ದಾರೆ. ಅವರ ಈ ನಿರ್ಧಾರಕ್ಕೆ ಕಾರಣ ನೀಡಿಲ್ಲ ಅಭಿಮಾನಿಗಳು ಇಷ್ಟದ ಗಾಯಕನ ನಿರ್ಧಾರದಿಂದ ಶಾಕ್ ಆಗಿದ್ದಾರೆ.