ಪುತ್ತೂರು: ಸಾಂಸ್ಕೃತಿಕ ಶ್ರೀಮಂತಿಕೆಯ ಕರಾವಳಿಯ ಕ್ರೀಡೆ 33ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳವು ಪುತ್ತೂರು ಶ್ರೀ ಮಾಲಿಂಗೇಶ್ವರ ದೇವರ ದೇವಮಾರು ಗದ್ದೆಯಲ್ಲಿ ಜ. 24 ರಂದು ಜೇನು ಕೃಷಿ ಕಲಾ ಪೋಷಕರು, ಪರಿಸರ ಉಳಿವಿಗಾಗಿ ಸಿಮೆಂಟ್ ಶೀಟಿನಲ್ಲಿ ಜೇನು ಪೆಟ್ಟಿಗೆ ಸಂಶೋಧಕರಾಗಿ, ಪ್ರಕೃತಿ ವೈಚಿತ್ರ ಬರಹಗಳ ಸುಂದರ ಲೇಖನಗಳನ್ನು , ಗಿಡಮೂಲಿಕೆಗಳ ಔಷಧಿಯ ವೈವಿಧ್ಯ ಬರಹಗಳನ್ನು, ವರದಿಗಾರರಾಗಿ ಅಲ್ಲದೇ ವಿನೂತನ ಪರಿಕಲ್ಪನೆಯೊಂದಿಗೆ ಸ್ವರ ಸಿಂಚನ ಕಲಾತಂಡ ದ ಸಂಗೀತವನ್ನು ಪ್ರಸರಿಸುವಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಕಲಾ ಪ್ರೋತ್ಸಾಹಕರಾಗಿ ಕಲಾ ನಿರ್ದೇಶಕರಾಗಿದ್ದು ಕೃಷಿ ಸಾಹಿತ್ಯ ಕ್ಷೇತ್ರದಲ್ಲಿ ಕುಮಾರ್ ಪೆರ್ನಾಜೆ ಸಾಧನೆಗೆ ಸಮಾರಂಭದ ಅಧ್ಯಕ್ಷರು ಶಾಸಕರು ಆದ ಅಶೋಕ್ ಕುಮಾರ್ ರೈ ಶಾಲು ಪೇಟ ಹೊದಿಸಿ ಸನ್ಮಾನ ಪತ್ರಗಳನ್ನಿತ್ತು ಸನ್ಮಾನಿಸಿದರು.

ಕಂಬಳ ಸಮಿತಿಯ ಗೌರವಾಧ್ಯಕ್ಷ ರಾದ ವಿನಯ್ ಕುಮಾರ್ ಸೊರಕೆ ಅವರು ಹಣ್ಣು ಹಂಪಲುಗಳನ್ನಿತ್ತು ಗೌರವಿಸಿದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿವಿ ಸನ್ಮಾನ ಪತ್ರವಾಚಿಸಿದರು.
ಕಂಬಳ ಸಮಿತಿಯ ಗೌರವಾಧ್ಯಕ್ಷೇ ಮಾಜಿ ಶಾಸಕಿ ಶಕುಂತಲಾ ಟಿ .ಶೆಟ್ಟಿ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಕೋಶಾಧಿಕಾರಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಪಂಜಿಗುಡ್ಡೆ ಈಶ್ವರ ಭಟ್,
ಕಂಬಳದ ತೀರ್ಪುಗಾರ ಗುಣಪಾಲ ಕಡಂಬ ,ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ , ದ. ಕ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮದ್ ಬಡಗನ್ನೂರು ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮೌರಿಸ್ ಮಸ್ಕರೆನಸ್, ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮದ್ ಜಿಲ್ಲಾ ಸೆಷನ್ಸ್ ನ್ಯಾಯಾಧೀಶೆ ಸರಿತ , ನ್ಯಾಯಾಧೀಶೆ ಪ್ರಕೃತಿ ,ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಅಲಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಮಲ್ಲಿಕಾ ಪಕ್ಕಳ ಚಲನಚಿತ್ರ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮುಂತಾದ ಗಣ್ಯ ಅತಿಥಿಗಳು ಖ್ಯಾತ ಚಲನಚಿತ್ರ ನಟ ನಟಿಯರು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಾವು ಪಟ್ಟ ಶ್ರಮಕ್ಕೆ ಪ್ರತಿಫಲ ಬಯಸದೆ ಮಾಡುವ ಕೆಲಸಕ್ಕೆ ಸಿಕ್ಕ ಗೌರವ ಜೀವನದ ದಾರಿಯಲ್ಲಿ ತಿರುವುಗಳು ನೂರಾರು ಸಾಧಿಸುವ ಛಲ ಇದ್ದರೆ ಗೆಲುವು ಖಂಡಿತ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸಂಚಾಲಕ ವಸಂತಕುಮಾರ್ ರೈ ದುಗ್ಗಳ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ನಿರೂಪಿಸಿದರು.