ಪೊಳಲಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 17/12/2025 ರಿಂದ 19/12/2025ರ ವರೆಗೆ ನಡೆಸಿದ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯಲ್ಲಿ ಸರಕಾರಿ ಪ್ರೌಢಶಾಲೆ ಪೊಳಲಿಯ 27 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.100 ಫಲಿತಾಂಶ ಬಂದಿರುತ್ತದೆ. 19 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 8 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಸಂಸ್ಥೆಯ ಸಾನಿಕ ಶೆಟ್ಟಿ ಪ್ರಥಮ ಅಮನ್ ಕುಮಾರ್ ದ್ವಿತೀಯ ಹಾಗೂ ಸುಭಿಕ್ಷಾ ತೃತೀಯ ಸ್ಥಾನ ಪಡೆದಿರುತ್ತಾರೆ.

ವಿದ್ಯಾರ್ಥಿಗಳಿಗೆ ಚಿತ್ರಕಲಾ ಶಿಕ್ಷಕ ಮುರಳೀಧರ ಆಚಾರ್ ತರಬೇತಿ ನೀಡಿರುತ್ತಾರೆ. ಉತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಶ್ರೀ ವೆಂಕಟೇಶ್ ನಾವಡ, ಮುಖ್ಯಶಿಕ್ಷಕರು ಶ್ರೀ ಸುಬ್ರಾಯ ಪೈ ಹಾಗೂ ಶಿಕ್ಷಕ ವೃಂದ ಅಭಿನಂದಿಸಿ ಶುಭಹಾರೈಸಿದರು.
