ಪುರುಷರಿಗೂ ಫ್ರೀ ಬಸ್‌, ಪ್ರತಿಯೊಬ್ಬರಿಗೂ ಸೂರು; AIADMK ಪಂಚ ಗ್ಯಾರಂಟಿ ಘೋಷಣೆ

ಚೆನ್ನೈ: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಎಐಎಡಿಎಂಕೆ ಪಕ್ಷವು ಮೊದಲ ಹಂತದ ಚುನಾವಣಾ ಭರವಸೆಗಳನ್ನ ಘೋಷಿಸಿದ್ದಾರೆ.

ಮುಂಬರುವ 17ನೇ ವಿಧಾನಸಭಾ ಚುನಾವಣೆಗೆ ಪಕ್ಷವು ಸಾಮಾಜಿಕ ನ್ಯಾಯದ ಪರವಾಗಿ ಹೋರಾಡಲಿದೆ. ಜನ ಕಲ್ಯಾಣದ ಏಕೈಕ ಉದ್ದೇಶದಿಂದ ಕಾರ್ಯನಿರ್ವಹಿಸುವ ಸಲುವಾಗಿ ಮೊದಲ ಹಂತದ ಚುನಾವಣಾ ಭರವಸೆಗಳನ್ನೂ ಈಗಲೇ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಾರಿ ಎಐಡಿಎಂಕೆ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೆ ಮಾಸಿಕ 2 ಸಾವಿರ ರೂಪಾಯಿ, ಮಹಿಳೆಯರ ಜೊತೆ ಪುರುಷರಿಗೂ ಉಚಿತ ಬಸ್ ಸೇವೆ ವಿಸ್ತರಣೆ ಮಾಡುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ಯೋಜನೆಯನ್ನ ಪ್ರಕಟಿಸಿದ್ದಾರೆ.

ಮೊದಲ ಹಂತದ ಚುನಾವಣಾ ಭರವಸೆಗಳು:

1. ಮಹಿಳಾ ಕಲ್ಯಾಣ(ಕುಲ ವಿಳಕ್ಕು ಯೋಜನೆ)
2. ಪುರುಷರಿಗೂ ಫ್ರೀ ಬಸ್‌
3. ಎಲ್ಲರಿಗೂ ಮನೆ (ಅಮ್ಮ ಇಲ್ಲಂ ಯೋಜನೆ)
4. ಯೋಜನೆ 150 ದಿನಗಳಿಗೆ ಹೆಚ್ಚಳ
5. ಅಮ್ಮ ದ್ವಿಚಕ್ರ ವಾಹನ ವಿತರಣಾ ಯೋಜನೆ

error: Content is protected !!