ವಿಜಯ್ ಹಜಾರೆ: ಕ್ವಾರ್ಟರ್ ಫೈನಲ್ ಗೆ ಕರ್ನಾಟಕ; ಅಗ್ರಸ್ಥಾನದ ಗೌರವ

ಅಹ್ಮದಾಬಾದ್: ಆರಕ್ಕೆ ಆರೂ ಪಂದ್ಯ ಗೆದ್ದ ಕರ್ನಾಟಕ “ವಿಜಯ್ ಹಜಾರೆ ಟ್ರೋಫಿ” ಏಕದಿನ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಹಾಕಿದ್ದು, ಮಂಗಳವಾರದ ಮುಖಾಮುಖಿಯಲ್ಲಿ ರಾಜ್ಯ ತಂಡ ರಾಜಸ್ಥಾನವನ್ನು ಬರೋಬ್ಬರಿ 150 ರನ್ ಗಳಿಂದ ಸೋಲಿಸಿದೆ. ಇದರೊಂದಿಗೆ ಕನರ್ಟಟಕ ‘ಎ’ ವಿಭಾಗದ ಅಗ್ರಸ್ಥಾನದ ಗೌರವ ಸಂಪಾದಿಸಿದೆ.

ನಾಯಕ ಮಾಯಾಂಕ್ ಅಗರ್ವಾಲ್ ಅವರು ಶತಕ (100) ಮತ್ತು ದೇವದತ್ತ ಪಡಿಕ್ಕಲ್ ಅವರು 91 ರನ್ ಗಳ ಕೊಡುಗೆಯನ್ನು ನೀಡಿದ್ದಾರೆ. ಇವರು ಮೊದಲ ವಿಕೆಟಿಗೆ 28.2 ಓವರ್ ಗಳಲ್ಲಿ ದಾಖಲಿಸಿದ 184 ರನ್ ಜತೆಯಾಟ, ಪ್ರಸಿದ್ಧ್ ಕೃಷ್ಣ ಅವರ 5 ವಿಕೆಟ್ ಬೇಟೆಯೆಲ್ಲ ಕರ್ನಾಟಕದ ಜಯಭೇರಿಯಲ್ಲಿ ಮಹತ್ವದ ಪಾತ್ರ ವಹಿಸಿತು.

ಕರ್ನಾಟಕ 7 ವಿಕೆಟಿಗೆ 324 ರನ್ ಗಳಿಸಿದರೆ, ರಾಜಸ್ಥಾನ 38 ಓವರ್ ಗಳಲ್ಲಿ 174ಕ್ಕೆ ಕುಸಿಯಿತು.

ಕಳೆದ 5 ಪಂದ್ಯಗಳಲ್ಲಿ 4 ಶತಕ ಬಾರಿಸಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದ ದೇವದತ್ತ ಪಡಿಕ್ಕಲ್ ಮುಂದೆ 5ನೇ ಸೆಂಚುರಿ ಪೂರೈಸುವ ಉತ್ತಮ ಅವಕಾಶವಿತ್ತು. ಆದರೆ ಅವರು 91 ರನ್ ಮಾಡಿ ನಾಯಕ ಮಾನವ್ ಸುತಾರ್ ಎಸೆತದಲ್ಲಿ ಬೌಲ್ಡ್ ಆಗಿದ್ದಾರೆ. 82 ಎಸೆತಗಳ ಈ ಆಕರ್ಷಕ ಆಟದ ವೇಳೆ ಪಡಿಕ್ಕಲ್ 12 ಬೌಂಡರಿ, 2 ಸಿಕ್ಸ್ ಸಿಡಿಸಿದರು.

error: Content is protected !!