ಉಡುಪಿ: ಹೆಜಮಾಡಿ ಕಡಲ ತೀರದಲ್ಲಿ ರಾಶಿ ರಾಶಿಯಾಗಿ ಬೂತಾಯಿ ಮೀನುಗಳು ಕಡಲ ತೀರಕ್ಕೆ ಜಿಗಿದು ಬಂದ ಪರಿಣಾಮ ಸ್ಥಳೀಯ ನಿವಾಸಿಗಳು ಮೀನಿಗಾಗಿ ಮುಗಿ ಬಿದ್ದಿದ್ದಾರೆ.

ಕೈರಂಪಣಿ ಬಲೆ ಬೀಸುವ ವೇಳೆ ಸಮುದ್ರದ ತೀರ ಪ್ರದೇಶಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಬೂತಾಯಿ ಮೀನುಗಳು ಜಿಗಿದು ಬಂದಿದ್ದು, ಅಚ್ಚರಿಯ ಈ ದೃಶ್ಯವನ್ನು ಕಂಡ ಸ್ಥಳೀಯರು ಹಾಗೂ ತೀರ ಪ್ರದೇಶದ ನಿವಾಸಿಗಳು ಕೈಗೆ ಸಿಕ್ಕಿದಷ್ಟು ಮೀನುಗಳನ್ನು ಹೆಕ್ಕಿಕೊಂಡು ಹೋಗಿದ್ದಾರೆ.


ಕಡಲ ತೀರದಲ್ಲಿ ಬೂತಾಯಿ ಮೀನುಗಳು ಜಿಗಿಯುತ್ತಿರುವುದು ಹಾಗೂ ಜನರು ಅವುಗಳನ್ನು ಹಿಡಿದುಕೊಂಡು ಹೋಗುತ್ತಿರುವ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

