ಮೊದಲ ದಿನವೇ 1,020 ಪ್ರದರ್ಶನಗಳ ಮೂಲಕ ದಾಖಲೆ ಬರೆದ ʼಜೈʼ ಸಿನಿಮಾಗೆ 50 ನೇ ದಿನದ ಸಂಭ್ರಮ

ಮಂಗಳೂರು: ರಾಕ್‌ಸ್ಟಾರ್‌ ರೂಪೇಶ್‌ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಜೈ ತುಳು ಮತ್ತು ಕನ್ನಡ ಭಾಷೆಯಲ್ಲಿ ಪ್ರಥಮ ದಿನವೇ 1,020 ಪ್ರದರ್ಶನ ನೀಡುವ ಮೂಲಕ ದಾಖಲೆ ಬರೆದು ಇದೀಗ 50 ದಿನಗಳನ್ನು ಪೂರೈಸಿದೆ.

ಜೈ ಸಿನೆಮಾ ಜ. 11ರಂದು ಪೂನಾದಲ್ಲಿ ಪ್ರದರ್ಶನಗೊಳ್ಳಲಿದ್ದು, ಮುಂಬಯಿಯಲ್ಲಿ ಇತಿಹಾಸದಲ್ಲೇ ಅತೀ ದೊಡ್ಡ ತುಳು ಪ್ರೀಮಿಯರ್‌ ಒಂದೇ ದಿನ 9 ಟಾಕೀಸ್‌ ಗಳಲ್ಲಿ 25ಕ್ಕೂ ಹೆಚ್ಚು ಶೋ ನಡೆದು ದಾಖಲೆಯನ್ನು ನಿರ್ಮಿಸಿದೆ.

ಮಂಗಳೂರಿನಲ್ಲಿ ಸತತ ಎಂಟು ವಾರಗಳ ಪ್ರದರ್ಶನದಲ್ಲಿ ಉತ್ತಮ ಮೊತ್ತವನ್ನು ಜೈ ಸಿನಿಮಾ ಕಲೆ ಹಾಕಿದೆ. ಸಿನೆಮಾದ ಡಬ್ಬಿಂಗ್‌ ರೈಟ್ಸ್‌ ಆಡಿಯೋ ರೈಟ್ಸ್‌ ಮತ್ತು ಪ್ರೀಮಿಯರ್‌ಶೋ ಸೇರಿ ದೊಡ್ಡ ಮಟ್ಟದಲ್ಲಿ ಚಿತ್ರ ತಂಡಕ್ಕೆ ಹಣ ಸಂಗ್ರಹವಾಗಿದೆ. ಸಿನೆಮಾವನ್ನು ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಮನೆಮಂದಿ ಎಲ್ಲ ಇಷ್ಟ ಪಡುವುದರ ಜತೆಗೆ ಶಾಲಾ ಮಕ್ಕಳು ಕೂಡ ಸಿನೆಮಾ ನೋಡಿ ಮೆಚ್ಚಿದ್ದಾರೆ ಎಂದು ನಟ ನಿರ್ದೇಶಕ ರೂಪೇಶ್‌ ಶೆಟ್ಟಿ ತಿಳಿಸಿದ್ದಾರೆ.

ಜೈ ಸಿನೆಮಾ ತುಳುವಿನಲ್ಲಿ ಬಿಗ್‌ ಬಜೆಟ್‌ ನ ಸಿನೆಮಾ ಆಗಿದ್ದು, ಜಿಲ್ಲೆಯ ಖ್ಯಾತನಾಮ ಕಲಾವಿದರು ಅಭಿನಯಿಸಿದ್ದಾರೆ. ಗಿರಿಗಿಟ್‌, ಸರ್ಕಸ್‌ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್‌ ಶೆಟ್ಟಿ ಅವರು ಜೈ ಸಿನೆಮಾವನ್ನು ನಿರ್ದೇಶಿಸಿದ್ದಾರೆ. ಈ ಸಿನೆಮಾದಲ್ಲಿ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಕೂಡ ಪಾತ್ರ ನಿರ್ವಹಿಸಿದ್ದು, ಅದು ಹೆಚ್ಚಿನ ಪರಿಣಾಮ ಬೀರಿದೆ.

error: Content is protected !!