ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಬೆಡ್ ರೂಂ!!

ಕಾಸರಗೋಡು: ಮೊಬೈಲ್ ಚಾರ್ಜ್ ಮಾಡುವ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮನೆಯ ಬೆಡ್ ರೂಂ ಸಂಪೂರ್ಣ ಹೊತ್ತಿ ಉರಿದ ಘಟನೆ ಬುಧವಾರ(ಡಿ.31) ರಾತ್ರಿ 9.30ರ ವೇಳೆಗೆ ಉಳಿಯತ್ತಡ್ಕ ಭಗವತಿ ನಗರದಲ್ಲಿ ನಡೆದಿದೆ.

ಚಿತ್ರ ಕುಮಾರಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಕಾಸರಗೋಡಿನಿಂದ ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿ ನಂದಿಸಿದರು. ಕೋಣೆಯಲ್ಲಿರಿಸಿದ್ದ ಕಪಾಟು, ಮೇಜು, ಮಂಚ, ಹಾಸಿಗೆ, ಉಡುಪು ಸಹಿತ ಬೆಲೆ ಬಾಳುವ ವಸ್ತುಗಳು ಹೊತ್ತಿ ಉರಿದಿವೆ.

error: Content is protected !!