ನವದೆಹಲಿ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಎಸ್‌ಎಸ್‌ಎಫ್ ಮತ್ತು ಅಸ್ಸಾಂ ರೈಫಲ್ಸ್ ಪಡೆಗಳಲ್ಲಿ 25,487 ಕಾನ್ಸ್ಟೆಬಲ್ (ಜಿ.ಡಿ.) ಹುದ್ದೆಗಳಿಗೆ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಅರ್ಜಿ ಆಹ್ವಾನವನ್ನು ಹೊರಡಿಸಿದೆ. 10ನೇ ತರಗತಿ ತೇರ್ಗಡೆಯಾದ ಯುವಕ-ಯುವತಿಯರು ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.

ಈ ಬಾರಿ ಪುರುಷರಿಗೆ 23,467 ಹಾಗೂ ಮಹಿಳೆಯರಿಗೆ 2,020 ಲಿಂಗಾವಾರು ಮೀಸಲಾತಿಯನ್ನು ನೀಡಲಾಗಿದೆ. ಬಿಎಸ್‌ಎಫ್: 616, ಸಿಐಎಸ್ ಎಫ್: 14,595, ಸಿಆರ್‌ಪಿಎಫ್: 5,490, ಐಟಿಬಿಪಿ: 1,293, ಎಆರ್: 1,076, ಎಸ್‌ಎಸ್‌ಎಫ್: 23 ಹುದ್ದೆಗಳಿಗೆ ಅವಕಾಶಗಳಿವೆ.
ವಿದ್ಯಾರ್ಹತೆ: ಮೆಟ್ರಿಕ್ಯುಲೇಶನ್ ಅಥವಾ 10ನೇ ತರಗತಿ ತೇರ್ಗಡೆ. ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಪಡೆದ ಪ್ರಮಾಣಪತ್ರ ಅಗತ್ಯ. ಎನ್‌ಸಿಸಿ ಪ್ರಮಾಣಪತ್ರ ಹೊಂದಿರುವವರಿಗೆ ಬೋನಸ್ ಅಂಕಗಳು ಲಭ್ಯ.
ವಯೋಮಿತಿ: ಕನಿಷ್ಠ 18 ವರ್ಷಗಳು, ಗರಿಷ್ಠ 23 ವರ್ಷಗಳು. ಎಸ್‌ಸಿ/ ಎಸ್‌ಟಿ ವರ್ಗಕ್ಕೆ 5 ವರ್ಷಗಳು, ಒಬಿಸಿ ವರ್ಗಕ್ಕೆ 3 ವರ್ಷಗಳು, ಮಾಜಿ ಸೈನಿಕರಿಗೆ 3 ವರ್ಷ ಸಡಿಲಿಕೆ ಇದೆ.
ನೇಮಕಾತಿ ವಿಧಾನ: ಆಯ್ಕೆಯ ನಂತರ ತರಬೇತಿ, ಪ್ರೊಬೇಶನ್ ಅವಧಿ ಇರುತ್ತದೆ. ಅಭ್ಯರ್ಥಿಗಳು ದೈಹಿಕ ಮತ್ತು ವೃತ್ತಿಪರ ಅರ್ಹತೆಗಳನ್ನು ಸಾಬೀತುಪಡಿಸಬೇಕು.
ಉದ್ಯೋಗ ಸ್ಥಳ: ದೇಶದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಲು ಸಿದ್ಧರಿರಬೇಕು.
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಅರ್ಜಿ ಶುಲ್ಕ: ಪುರುಷ ಅಭ್ಯರ್ಥಿಗಳಿಗೆ 100ರೂ. ಮಹಿಳಾ/ಎಸ್‌ಸಿ/ಎಸ್‌ಟಿ/ ಮತ್ತು ಮಾಜಿ ಸೈನಿಕರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಮಾನದಂಡ ಪರೀಕ್ಷೆ, ದೈಹಿಕ ದಕ್ಷತಾ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿ ಪರಿಶೀಲನೆ.
ಅರ್ಜಿ ಸಲ್ಲಿಸಲು ಕೊನೇ ದಿನಾಂಕ: 31-12-25
ಅರ್ಜಿ ಸಲ್ಲಿಸಲು: https://ssc.gov.in/