ಗುರು ಪ್ರೇಂಡ್ಸ್ ಗುರುನಗರ ಮತ್ತು ಗುರು ಮಹಿಳಾ ಸಂಘದ ಬೆಳ್ಳಿ ಹಬ್ಬ ಸಂಭ್ರಮ

ಗುರು ಪ್ರೇಂಡ್ಸ್ ಗುರುನಗರ ಮತ್ತು ಗುರು ಮಹಿಳಾ ಸಂಘ 9 ನೇ ವಿಭಾಗ ಗುರುನಗರ ಮಧ್ಯ ಇವರ ಬೆಳ್ಳಿ ಹಬ್ಬ ಸಂಭ್ರಮಾಚರಣೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಶಾಲಾ ಮೈದಾನದಲ್ಲಿ ಅಚರಿಸಲಾಯಿತು.ಕಾರ್ಯಕ್ರಮವನ್ನು ಎಂ.ಆರ್.ಪಿ.ಎಲ್ ಜಾನಕಿ ಕನ್ ಸ್ಟಕ್ಷನ್ ಮಾಲಕರಾದ ಧರ್ಮೆಂದ್ರ ಗಣೇಶಪುರ ಉದ್ಘಾಟಿಸಿದರು.‌

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬಯಿ ಉದ್ಯಮಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ವಹಿಸಿದ್ದರು, ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್, ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮುಂಬಯಿ ಉದ್ಯಮಿ ಕರುಣಾಕರ ಎಂ ಶೆಟ್ಟಿ ಅವರಿಗೆ ವಿದ್ಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ಕಳೆದ 25 ವರ್ಷಗಳಿಂದ ಸಂಘದ ಎಳಿಗೆಗಾಗಿ ಶ್ರಮಿಸಿದ ಸಂಘದ ಎಲ್ಲಾ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣ ವಿದ್ಯಾಸಂಸ್ಥೆ ಸಂಚಾಲಕರಾದ ದಯಾಕರ್ ಪಿ ಕುಳಾಯಿ,ಎಂ,ಅರ್,ಪಿ.ಎಲ್ ಹಣಕಾಸು ವಿಭಾಗದ ಪ್ರಭಂದಕರಾದ ಜಯಲಕ್ಷ್ಮಿ ಅರ್ ಶೆಟ್ಟಿ, ಉದ್ಯಮಿ ಹರೀಶ್ ಮುಂಚೂರು,ಶ್ರೀನಿವಾಸ್ ಕೋಟ್ಯಾನ್ ದುಬೈ, ಕೇಬಲ್ ಮಾಲಕರಾದ ಸೂರಜ್ ಅಂಚನ್ ಕೃಷ್ಣಾಪುರ,ಚೇಳೈರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಪ್ರಸಾದ್ ಶೆಟ್ಟಿ ಹನುಮನಗರ,ರಮಾನಾಥ ಶೆಟ್ಟಿ ಗುರುನಗರ,ರಾಜಾರಾಮ್ ಸಾಲ್ಯಾನ್ ಪಡುಪದವು,ಸೌಮ್ಯ ಸುದೀರ್ ಕೃಷ್ಣಾಪುರ, ದೈವಾರಾಧಕರಾದ ಪ್ರಕಾಸ್ ಪೂಜಾರಿ ಮಧ್ಯ,ಗಣೇಶ್ ಪೂಜಾರಿ ಕೊಡಿಪಾಡಿ,ವಕೀಲರಾದ ಸದಾಶಿವ ಐತಾಳ್,ಬೆಳ್ಳಿ ಹಬ್ಬ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಮುಡಾಯಿಕೊಡಿ, ಗುರು ಪ್ರೇಂಡ್ಸ್ ಸಂಘದ ಅಧ್ಯಕ್ಷ ಭವಾನಿಶಂಕರ್,ಗುರು ಮಹಿಳಾ ಸಂಘದ ಅಧ್ಯಕ್ಷೆ ಉಷಾ ಶಂಕರ್,ಮುಂತಾದವರು ಉಪಸ್ಥಿತರಿದ್ದರು.

ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಸ್ವಾಗತಿಸಿ ಸಂತೋಷ್ ಪೂಜಾರಿ ಧನ್ಯವಾದ ಸಮರ್ಪಿಸಿ ರಾಜೇಶ್ ಕೊಟ್ಡಾರಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!