ಶಬರಿಮಲೆ: ಡಿ. 26 ಮತ್ತು 27 ರಂದು ನಡೆಯುವ ಮಂಡಲ ಪೂಜೆಗೆ ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ವರ್ಚುವಲ್ ಕ್ಯೂ ಬುಕ್ಕಿಂಗ್ ಡಿ. 11 ರಂದು ಸಂಜೆ 5 ಗಂಟೆಗೆ ಪ್ರಾರಂಭವಾಗಿದ್ದು, ದರ್ಶನಕ್ಕಾಗಿ ಸ್ಲಾಟ್‌ಗಳನ್ನು sabarimalaonline.org ವೆಬ್‌ಸೈಟ್ ಮೂಲಕ ಬುಕ್ ಮಾಡಬೇಕು.

ಡಿ. 26 ಮತ್ತು 27ರಂದು 30,000 ಭಕ್ತರಿಗೆ ವರ್ಚುವಲ್ ಕ್ಯೂ ಮೂಲಕ ದರ್ಶನ ಪಡೆಯಲು ಅವಕಾಶವಿದೆ. ಈ ದಿನಗಳಲ್ಲಿ ಸ್ಪಾಟ್ ಬುಕ್ಕಿಂಗ್ ಮೂಲಕ ಐದು ಸಾವಿರ ಭಕ್ತರಿಗೆ ಅವಕಾಶ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.