ಸಿದ್ದರಾಮಯ್ಯ ಬದಲಾಯಿಸೋ ಗಟ್ಸ್ ಯಾರಿಗ್ರೀ ಇದೆ: ಜಮೀರ್‌ ಗುಟುರು

ಬೆಳಗಾವಿ: ಕರ್ನಾಟಕದಲ್ಲಿ ಪವರ್‌ ಶೇರಿಂಗ್‌ ವಿಚಾರವಾಗಿ ಸಿದ್ದು- ಡಿಕೆಶಿ ಬಣ ಮುಸುಕಿನೊಳಗಡೆ ಗುದ್ದಾಡುತ್ತಿರುವ ಮಧ್ಯೆ ‘ಸಿದ್ದರಾಮಯ್ಯ ಬದಲಾಯಿಸೋ ಗಟ್ಸ್ ಯಾರಿಗ್ರೀ ಇದೆ’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಗುಟುರು ಹಾಕಿದ್ದಾರೆ.

‘ಮುಖ್ಯಮಂತ್ರಿ ಸ್ಥಾನದಿಂದ ಸಿದ್ಧರಾಮಯ್ಯ ಬದಲಾಯಿಸಲು ಯಾರಿಗೆ ಗಟ್ಸ್ ಇದೆ? ಆ ಗಟ್ಸ್ ಇರೋದು ಪಕ್ಷದ ಹೈಕಮಾಂಡ್‌ಗೆ ಮಾತ್ರ’ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್ ಖಾನ್, ‘2028ರವರೆಗೂ ಸಿದ್ದರಾಮಯ್ಯ ಅವರು ಸಿಎಂ ಆಗಿರಬೇಕು. ಇದು ನನ್ನ ವೈಯಕ್ತಿಕ ಹೇಳಿಕೆ’ ಎಂದು ತಿಳಿಸಿದರು.

error: Content is protected !!