ಲಾರಿ ಪಲ್ಟಿಯಾಗಿ 2 ಸಾವಿರ ಕೋಳಿಗಳು ಸಾವು: ಚಾಲಕ ಅಪಾಯದಿಂದ ಪಾರು

ಹೊಳೆಹೊನ್ನೂರು: ರಾಣೇಬೆನ್ನೂರಿನ ಮಂಜುನಾಥ್ ಎಂಬವರಿಗೆ ಸುಮಾರು 3000 ಕೋಳಿಗಳನ್ನು ತುಂಬಿಕೊಂಡು ಡೆಲಿವರಿ ಕೊಡಲು ಹೋಗುತ್ತಿರುವಾಗ ಲಾರಿಯೊಂದು ಪಲ್ಟಿಯಾದ ಘಟನೆ ಇಂದು(ಡಿ.11) ಮುಂಜಾನೆ 5 ಗಂಟೆ ಸುಮಾರಿಗೆ ಮಲ್ಲಾಪುರದ ಗುಡ್ಡದ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಕ್ರಾಸ್ ಬಳಿ ನಡೆದಿದೆ.

ಕ್ಲೀನರ್ ಆಶ್ರಫ್ (32 ವರ್ಷ) ತೀವ್ರ ಗಾಯಗೊಂಡಿದ್ದು, ಚಾಲಕ ಹಾಗೂ ಲಾರಿಯಲ್ಲಿದ್ದ ಇನ್ನೊಬ್ಬ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆಶ್ರಫ್ ನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಪರಿಣಾಮ ಲಾರಿ ರಸ್ತೆ ಪಕ್ಕದ ಅಡಿಕೆ ತೋಟಕ್ಕೆ ಬಿದ್ದಿದ್ದು, ಸುಮಾರು 3000 ಸಾವಿರ ಕೋಳಿಗಳಲ್ಲಿ ಸುಮಾರು 2000 ಸಾವಿರ ಕೋಳಿಗಳು ಸ್ಥಳದಲ್ಲೇ ಸತ್ತು ಹೋಗಿದ್ದು, ಅಂದಾಜು 7 ಲಕ್ಷದ ನಷ್ಟ ಸಂಭವಿಸಿದೆ ಎಂದು ಕೋಳಿ ಖರೀದಿಸಿದ್ದ ಮಂಜುನಾಥ ಹಾವೇರಿ ತಿಳಿಸಿದ್ದಾರೆ.

ಚಾಲಕ ಮುಂದೆ ಇರುವ ಅಪಾಯಕಾರಿ ತಿರುವನ್ನು ಗಮನಿಸದೆ ಮುಂದೆ ಬಂದ ವಾಹನ ತಪ್ಪಿಸಲು ಹೋಗಿ ಈ ಘಟನೆ ನಡೆದಿದೆ. ಅಪಘಾತ ನಡೆದ ಸಮಯ ಬೆಳಗಿನ ಜಾವ ಆಗಿದ್ದರಿಂದ ಕೆಲಸಕ್ಕೆ ಹೊರಟಿದ್ದ ಜನರು, ಸುತ್ತಮುತ್ತಲಿನ ಗ್ರಾಮಸ್ಥರು ಜಮಾಯಿಸಿದ್ದು, ಅಪಘಾತದಲ್ಲಿ ಸತ್ತ ಕೋಳಿಗಳನ್ನು ತಮ್ಮ ಚೀಲಗಳಲ್ಲಿ ತುಂಬಿಕೊಳ್ಳಲು ಜನ ಮುಗಿಬಿದ್ದರು. ನಾ ಮುಂದು, ತಾ ಮುಂದು ಎಂದು ಸಿಕ್ಕ ಸಿಕ್ಕ ಚೀಲಗಳಲ್ಲಿ ಕೋಳಿಗಳನ್ನು ತುಂಬಿಕೊಂಡು ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

error: Content is protected !!