ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡ ವಿದ್ಯಾರ್ಥಿನಿ ಸಾವು

ಸುಳ್ಯ: ಗುತ್ತಿಗಾರಿನ ಚಿಕ್ಕುಳಿ ಪ್ರದೇಶದಲ್ಲಿ ಮೂವರು ದಿನಗಳಿಂದ ಚಿಕಿತ್ಸೆಯಲ್ಲಿದ್ದ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿ ಪೂಜಾ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ಪದವಿ ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಪೂಜಾ ತಾವು ವಾಸಿಸುತ್ತಿದ್ದ ಗುತ್ತಿಗಾರಿನ ಚಿಕ್ಕುಳಿ ಬಳಿಯಲ್ಲಿ ಮೂರು ದಿನಗಳ ಹಿಂದೆ ಇಲಿಪಾಷಾಣ ಸೇವಿಸಿದ್ದರು. ನಂತರ ಗಂಭೀರ ಅಸ್ವಸ್ಥತೆಗೆ ಒಳಗಾದ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿರಂತರ ಚಿಕಿತ್ಸೆಯ ಪ್ರಯತ್ನಗಳಿಗೂ ಸ್ಪಂದಿಸದೇ ಬುಧವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪೂಜಾ ತಂದೆ, ತಾಯಿ, ಒಬ್ಬ ಸಹೋದರ ಹಾಗೂ ಒಬ್ಬ ಸಹೋದರಿಯನ್ನು ಅಗಲಿದ್ದಾರೆ.

ಇಲಿಪಾಷಾನ ನಿಷೇಧಿಸಬೇಕಿದೆ:
ಇಲಿಪಾಷಾಣದ ಸುಲಭ ಲಭ್ಯತೆ ಅನೇಕ ಯುವ ಜೀವಗಳನ್ನು ಕಸಿದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅದರ ಮಾರಾಟ ಮತ್ತು ಬಳಕೆಯನ್ನು ತಕ್ಷಣ ನಿಷೇಧಿಸಬೇಕಿದೆ. ವಿಷಕಾರಿ ರಾಸಾಯನಿಕವಾಗಿರುವ ಇಲಿಪಾಷಾಣ ಮಾನವ ಜೀವಕ್ಕೆ ಮಾರಕವಾಗಿದ್ದು, ಇದನ್ನು ನಿಯಂತ್ರಣೆ ಇಲ್ಲದೆ ಮಾರಾಟ ಮಾಡುವುದು ದೊಡ್ಡ ಅಪಾಯಕ್ಕೆ ಕಾರಣವಾಗಿದೆ. ಯುವಜನರ ಭದ್ರತೆಗಾಗಿ ಕಠಿಣ ನಿಯಂತ್ರಣ ಮತ್ತು ಸಂಪೂರ್ಣ ನಿಷೇಧದ ಅಗತ್ಯ ತುರ್ತುವಾಗಿದೆ. ಇದನ್ನು ಸೇವಿಸಿದವರು ಬದುಕುಳಿದ ಉದಾಹರಣೆ ಕಡಿಮೆ. ಇಲಿಪಾಷಾನ ಸೇವಿಸಿ ಮೂರು ದಿನಗಳವರೆಗೆ ಯಾವುದೇ ಸಮಸ್ಯೆ ಇರದೆ ರೋಗಿ ಸೌಖ್ಯವಾದಂತೆ ಅನಿಸುತ್ತದೆ. ಆದರೆ ಕ್ರಮೇಣ ಅಂಗಾಂಗಗಳು ವಿಫಲಗೊಂಡು ರೋಗಿ ನರಳಿ ನರಳಿ ಸಾಯಬೇಕಾಗುತ್ತದೆ.

error: Content is protected !!