ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಎಣ್ಣೆ ಗಿರಣಿಯಲ್ಲಿ ಬೆಂಕಿ ಅವಘಡ

ಉಡುಪಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಬಸ್ ನಿಲ್ದಾಣದ ಬಳಿ ಇರುವ ಭಾಗೀರಥಿ ಎಣ್ಣೆ ಗಿರಣಿಯಲ್ಲಿ ಸಂಭವಿಸಿದೆ.

ಸಂಜೆ ವೇಳೆಗೆ ಬೆಂಕಿ ಹೊತ್ತಿಕೊಂಡು ಕಾರ್ಖಾನೆಯಲ್ಲಿ ಸಂಗ್ರಹಿಸಲಾಗಿದ್ದ ತೆಂಗಿನ ಎಣ್ಣೆ ಮತ್ತು ಕೊಬ್ಬರಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಗಿರಣಿಯ ಹೆಚ್ಚಿನ ಭಾಗ ಬೆಂಕಿಗಾಹುತಿಯಾಗಿದೆ.

ಉಡುಪಿಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

error: Content is protected !!