ಮಂಗಳೂರು: ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಮಂಗಳೂರು ತಂಡಕ್ಕೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತ ಸಂಭ್ರಮದಲ್ಲಿ ‘ರಂಗಾಂತರಂಗ’ ಸ್ವರ ಕರಗಳ ಸಮ್ಮಿಲನ ಮತ್ತು ಕಲಾವಿದ ನಾದ ಮಣಿ ನಾಲ್ಕೂರು ಇವರಿಂದ ವಿನೂತನ ತತ್ವ ಭಾವ ಗಾನ ಯಾನ ಕತ್ತಲ ಹಾಡು ಕಾರ್ಯಕ್ರಮ ಕುಂಜತ್ತಬೈಲ್ ಆಸರೆ ಮನೆಯಲ್ಲಿ ಜರುಗಿತು.

ಸ್ವರೂಪ ಅಧ್ಯಯನ ಸಮೂಹ ಮಂಗಳೂರು ಇದರ ನಿರ್ದೇಶಕ ಗೊಪಾಡ್ಕರ್,ಸಾಹಿತಿ ಡಾ.ವಸಂತ್ ಕುಮಾರ್ ಪೆರ್ಲಾ,ಕಲಾವಿದ ದಿನೇಶ್ ಹೊಳ್ಳ, ಶೈಕ್ಷಣಿಕ ಸಲಹೆಗಾರರಾದ ಮೊಹಮ್ಮದ್ ರಫೀಕ್ ಇವರು ಮಾತನಾಡುತ್ತಾ ರಂಗ ಸ್ವರೂಪ ತಂಡದ ಸಾಮಾಜಿಕ,ಶೈಕ್ಷಣಿಕ ಮತ್ತು ಪರಿಸರ ಸ್ನೇಹಿ ಕಾರ್ಯಗಳ ಕುರಿತು ಪ್ರಶಂಸಿದರು. ಪ್ರಮುಖರಾದ ಹುಸೈನ್ ರಿಯಾಝ್, ಜ್ಯೋತಿ ಸುಬ್ರಹ್ಮಣ್ಯ, ತಸ್ಲೀಮಾ ಬಾನು,ಹನೀಷಾ,ಅರವಿಂದ ಕುಡ್ಲ, ನವೀನ್ ಅಡ್ಕರ್, ರೈಹಾನ್,ವೈಷ್ಣವಿ,ಆದಂ ಖಾನ್, ಬದ್ರುದ್ದೀನ್ ಕೂಳೂರು,ಸುಮನಾ ರೆಬೆಲ್ಲೋ, ಸಂಸಾದ್ ಮುಂತಾದವರು ಉಪಸ್ಥಿತರಿದ್ದರು.ಸ್ವರೂಪ ದ ಸ್ಥಾಪಕರಾದ ಗೋಪಾಡ್ಕರ್ ಅವರನ್ನು ಅಭಿನಂದಿಸಲಾಯಿತು.

ರಂಗ ಸ್ವರೂಪ ತಂಡದ ಅಧ್ಯಕ್ಷ ರೆಹಮಾನ್ ಖಾನ್ ಕುಂಜತ್ತಬೈಲ್ ಪ್ರಾಸ್ತಾವಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು ಸ್ವಾಗತಿಸಿದರು, ಕಲಾವಿದ ಝುಬೇರ್ ಖಾನ್ ಕುಡ್ಲ ವಂದಿಸಿದರು, ಶಿಕ್ಷಕ ಪ್ರೇಂನಾಥ್ ಮರ್ಣೆ ಕಾರ್ಯಕ್ರಮ ನಿರೂಪಿಸಿದರು.