
ಸುರತ್ಕಲ್: ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾಮದೇವಾ ಭಜನಾ ಮಂಡಳಿಯ 75 ನೇ ವರ್ಷದ ಅಮೃತ ಮಹೋತ್ಸವದ ಪ್ರಯುಕ್ತ ಅಖಂಡ ಭಜನಾ ಸಪ್ತಾಹದ ಉದ್ಘಾಟನೆ ಸಮಾರಂಭ ನಡೆಯಿತು. ಉದ್ಘಾಟನೆಯನ್ನು ಚಿತ್ರಾಪುರ ಮಠದ ಶ್ರೀ ಶ್ರೀ ವಿಧ್ಯೇಂದ್ರ ತೀರ್ಥ ಸ್ವಾಮೀಜಿ ನೆರವೇರಿಸಿದರು.

ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿಗಳಾದ ವಿಜಯದಾಸ ಅಚಾರ್ಯ, ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀನಿವಾಸ ಅಸ್ರಣ್ಣ,ಸೂರಿಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ಪೈವ ಹೆಗಡೆ,ಸುರತ್ಕಲ್ ಜ್ಯೋತಿಷ್ಯರಾದ ನಾಗೇಂದ್ರ ಭಾರಧ್ವಾಜ್,ಸೂರಿಂಜೆ ಕೈಯೂರು ಪ್ರದ್ಯುಮ್ನರಾವ್,ವಿನಯಕುಮಾರ್ ಸೂರಿಂಜೆ, ಮಹಾಬಲ ಪೂಜಾರಿ ಕಡಂಬೋಡಿ, ,ವಾಮದೇವಾ ಭಜನಾ ಮಂಡಳಿ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಕಾರ್ಯಾಧ್ಯಕ್ಷರಾದ ಅನಿಲ್ ಶೆಟ್ಟಿ ತೇವು ಸೂರಿಂಜೆ, ಕಾರ್ಯದರ್ಶಿ ಜಯಶೀಲ ಸೂರಿಂಜೆ, ಕೋಶಾಧಿಕಾರಿ ವಾಮನ ಶೆಟ್ಟಿ ಗೋಣಮಜಲು,ಜಗನ್ನಾಥ ಶೆಟ್ಟಿ ತೇವು ಸೂರಿಂಜೆ ಮುಂತಾದವರು ಉಪಸ್ಥಿತರಿದ್ದರು