17 ಮಕ್ಕಳನ್ನು ಒತ್ತೆ ಇಟ್ಟು ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಭೂಪ ಎನ್‌ಕೌಂಟರ್‌ಗೆ ಬಲಿ

ಮುಂಬೈ: ಮುಂಬೈನ ಪೊವೈ ಪ್ರದೇಶದಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿ ಇಟ್ಟುಕೊಂಡು ಎರಡು ಗಂಟೆಗಳ ಕಾಲ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಆರೋಪಿ ರೋಹಿತ್ ಆರ್ಯ ಎಂಬಾತ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.

ಪೊಲೀಸರ ಪ್ರಕಾರ, ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಆರ್ಯ ಏರ್ ಗನ್ ಬಳಸಿ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಒಂದು ಸುತ್ತಿನ ಗುಂಡು ಹಾರಿಸಿ ಅವನನ್ನು ಮುಗಿಸಿಬಿಟ್ಟಿದ್ದಾರೆ. ಗುಂಡು ಆರ್ಯ ಅವರ ಎದೆಯ ಬಲಭಾಗಕ್ಕೆ ತಗುಲಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದು, ಈತನ ಮರಣೋತ್ತರ ಪರೀಕ್ಷೆಯನ್ನು ಜೆಜೆ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ.

ಆರ್‌ಎ ಸ್ಟುಡಿಯೋಸ್ ಎಂಬ ಸಣ್ಣ ಫಿಲ್ಮ್ ಸ್ಟುಡಿಯೋದೊಳಗೆ ನಾಟಕೀಯ ಘರ್ಷಣೆ ನಡೆದಿದೆ. ಅಲ್ಲಿ ಆರ್ಯ ಮಕ್ಕಳ “ಆಡಿಷನ್” ಕರೆದು ಸ್ಟುಡಿಯೋದಲ್ಲಿ ಒತ್ತೆಯಾಳಾಗಿರಿಸಿದ್ದ. ಅಲ್ಲಿ 8 ರಿಂದ 14 ವರ್ಷ ವಯಸ್ಸಿನ ಮಕ್ಕಳೇ ಇದ್ದು, ಸುಮಾರು ಎರಡು ಗಂಟೆಗಳ ಕಾಲ ಮಕ್ಕಳು ಇವನ ಒತ್ತೆಯಾಳಾಗಿದ್ದರು. ಕಾರ್ಯಾಚರಣೆಗೆ 8 ಮಂದಿ ಕಮಾಂಡೋಗಳನ್ನು ಬಳಸಲಾಗಿದ್ದು, ಅವರು ಚಾಕಚಕ್ಯತೆಯಿಂದ ಮಕ್ಕಳಿಗೆ ಯಾವುದೇ ಹಾನಿಯಾಗದಂತೆ ರಕ್ಷಿಸಿದ್ದಾರೆ.

ಪೊವೈ ಪೊಲೀಸ್ ಠಾಣಾ ಪೊಲೀಸರ ತಂಡವು ಮಧ್ಯಾಹ್ನ 1:45 ರ ಸುಮಾರಿಗೆ ತುರ್ತು ಕರೆ ಸ್ವೀಕರಿಸಿ ಘಟನಾ ಸ್ಥಳಕ್ಕೆ ತ್ವರಿತವಾಗಿ ಆಗಮಿಸಿತು. ಆರಂಭದಲ್ಲಿ ಮಾತುಕತೆಗಳು ತಕ್ಷಣ ಪ್ರಾರಂಭವಾದವು, ಆದರೆ ಆರ್ಯ ಮಕ್ಕಳನ್ನು ಬಿಡುಗಡೆ ಮಾಡಲು ನಿರಾಕರಿಸಿದ್ದಾನೆ. ತಾನು ಸ್ಟುಡಿಯೋಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದಾಗ, ಪೊಲೀಸ್ ತಂಡವು ಬಾತ್‌ರೂಮಿನ ಮೂಲಕ ಬಲವಂತವಾಗಿ ನುಗ್ಗಿ 17 ಮಕ್ಕಳಿಗೂ ಸುರಕ್ಷತೆ ಒದಗಿದ್ದರು.

ಘಟನೆಗೆ ಮುನ್ನ, ಆರ್ಯ ಒಂದು ವೀಡಿಯೊವನ್ನು ಬಿಡುಗಡೆ ಮಾಡಿ, “ಆತ್ಮಹತ್ಯೆಯಿಂದ ಸಾಯುವ ಬದಲು ಮಕ್ಕಳನ್ನು ಒತ್ತೆಯಾಳಾಗಿಟ್ಟುಕೊಳ್ಳುವುದನ್ನು ಆರಿಸಿಕೊಂಡೆ” ಎಂದು ಹೇಳಿದ್ದನು.

“ನಾನು ರೋಹಿತ್ ಆರ್ಯ. ಆತ್ಮಹತ್ಯೆಯಿಂದ ಸಾಯುವ ಬದಲು, ನಾನು ಒಂದು ಯೋಜನೆಯನ್ನು ರೂಪಿಸಿದ್ದೇನೆ ಮತ್ತು ಇಲ್ಲಿ ಕೆಲವು ಮಕ್ಕಳನ್ನು ಒತ್ತೆಯಾಳಾಗಿ ಇರಿಸಿದ್ದೇನೆ. ನನ್ನ ಬೇಡಿಕೆಗಳು ತುಂಬಾ ಸರಳ ಹಾಗೂ ನೀತಿಯುತ ಬೇಡಿಕೆಗಳಾಗಿವೆ. ಅಲ್ಲದೆ ನನ್ನಲ್ಲಿ ಕೆಲವು ಪ್ರಶ್ನೆಗಳೂ ಇವೆ. ನಿಮ್ಮಿಂದ ನಡೆಯುವ ಸಣ್ಣದೊಂದು ತಪ್ಪು ನಡೆ ಕೂಡ ನನ್ನನ್ನು ಉಗ್ರವಾಗಿ ಪ್ರಚೋದಿಸುತ್ತದೆ” ಎಂದು ಆತ ಎಚ್ಚರಿಸಿದ್ದನ್ನಲ್ಲದೆ ಸ್ಡುಡಿಯೋಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾನೆ. ʻನಾನು ಭಯೋತ್ಪಾದಕನಲ್ಲ” ಎಂದೂ ಆತ ಹೇಳಿದ್ದ.

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

“ನಾನು ಮಕ್ಕಳನ್ನು ನನ್ನ ಯೋಜನೆಯ ಭಾಗವಾಗಿ ಒತ್ತೆಯಾಳಾಗಿ ಇರಿಸಿದ್ದೇನೆ. ನಾನು ಬದುಕಿದ್ದರೆ, ನಾನು ಅದನ್ನು ಮಾಡಿಯೇ ಮಾಡುತ್ತೇನೆ; ನಾನು ಸತ್ತರೆ, ಬೇರೆಯವರು ಮಾಡುತ್ತಾರೆ, ಆದರೆ ಅದು ಖಂಡಿತವಾಗಿಯೂ ಸಂಭವಿಸುತ್ತದೆ ಏಕೆಂದರೆ ನಿಮ್ಮಿಂದ ನಡೆಯುವ ಸಣ್ಣದೊಂದು ತಪ್ಪು ನಡೆಯು ನನ್ನನ್ನು ಈ ಇಡೀ ಸ್ಥಳಕ್ಕೆ ಬೆಂಕಿ ಹಚ್ಚಿ ಅದರಲ್ಲಿ ಸಾಯುವಂತೆ ಮಾಡುತ್ತದೆ” ಎಂದು ಆರ್ಯ ವೀಡಿಯೊದಲ್ಲಿ ಹೇಳಿದ್ದ.

ಘಟನಾ ಸ್ಥಳದಿಂದ ಪೊಲೀಸರು ಏರ್ ಗನ್ ಮತ್ತು ಕೆಲವು ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ,

ಪೊವೈನಲ್ಲಿರುವ ವಸತಿ ಕಟ್ಟಡದ ನೆಲ ಮಹಡಿಯಲ್ಲಿರುವ ಆರ್‌ಎ ಸ್ಟುಡಿಯೋದಲ್ಲಿ ವೆಬ್ ಸೀರೀಸ್‌ ಮಾಡುವುದಾಗಿ ನಂಬಿಸಿ ಮಕ್ಕಳನ್ನು ಆಡಿಷನ್‌ಗೆ ಆಹ್ವಾನಿಸಲಾಗಿತ್ತು.

ಮುಖ್ಯಮಂತ್ರಿಗಳ My School, Beautiful School (ನನ್ನ ಶಾಲೆ, ಸುಂದರ ಶಾಲೆ) ಅಭಿಯಾನದಡಿಯಲ್ಲಿ ಪ್ರಾರಂಭಿಸಲಾದ ಪಿಎಲ್‌ಸಿ ನೈರ್ಮಲ್ಯ ಮಾನಿಟರ್ ಯೋಜನೆಗೆ ಇಲಾಖೆಯು ತನಗೆ ಹಣ ಪಾವತಿಸಬೇಕಾಗಿದೆ ಎಂದು ಅವರು ಈ ಹಿಂದೆ ಆರೋಪಿಸಿದ್ದ. 2013 ರಲ್ಲಿ ಪ್ರಾರಂಭವಾದ ʻಲೆಟ್ಸ್ ಚೇಂಜ್’ ಅಭಿಯಾನದ ಭಾಗವಾಗಿರುವ ಈ ಯೋಜನೆಯು ಶಾಲಾ ಮಕ್ಕಳನ್ನು “ಸ್ವಚ್ಛತೆಯ ರಾಯಭಾರಿಗಳು” ಮಾಡುವ ಗುರಿಯನ್ನು ಹೊಂದಿದ್ದೇನೆ ಎಂದು ಆರ್ಯ ಹೇಳಿಕೊಂಡಿದ್ದ.

ಇಲಾಖೆಯು ತನ್ನ ಕೆಲಸಕ್ಕಾಗಿ 2 ಕೋಟಿ ರೂ.ಗಳನ್ನು ಮಂಜೂರು ಮಾಡಿತ್ತು ಆದರೆ ಜನವರಿ 2024 ರಿಂದ ತನಗೆ ಹಣ ನೀಡಿಲ್ಲ ಎಂದು ಆರ್ಯ ಆರೋಪಿಸಿದ್ದ. ಅದಕ್ಕಾಗಿ ಆ ವರ್ಷ ಆರ್ಯ ಎರಡು ಬಾರಿ ಉಪವಾಸ ಸತ್ಯಾಗ್ರಹ ನಡೆಸಿ ಆಗಿನ ಶಿಕ್ಷಣ ಸಚಿವ ದೀಪಕ್ ಕೇಸರ್ಕರ್ ಅವರು ನನಗೆ ವೈಯಕ್ತಿಕ ಭರವಸೆಗಳನ್ನು ನೀಡಿದ್ದರೂ ಅಧಿಕಾರಿಗಳು ತಮ್ಮನ್ನು ಕಾರ್ಯಕ್ರಮದಿಂದ ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದ.

ಆರ್ಯ ಪ್ರಕಾರ, ಕೇಸರ್ಕರ್ ಅವರಿಗೆ ವೈಯಕ್ತಿಕ ಸಹಾಯವಾಗಿ 7 ಲಕ್ಷ ಮತ್ತು 8 ಲಕ್ಷ ರೂ.ಗಳ ಎರಡು ಚೆಕ್‌ಗಳನ್ನು ನೀಡಿದ್ದರು, ನಂತರ ಹೆಚ್ಚಿನ ಹಣದ ಭರವಸೆ ನೀಡಿದ್ದರು – ಆರ್ಯ ಹೇಳಿಕೊಂಡಿದ್ದು, ಆದರೆ ತನ್ನ ಭರವಸೆ ಎಂದಿಗೂ ಈಡೇರಲಿಲ್ಲ ಎಂದು ಆರೋಪಿಸಿದ್ದನು.

ಆದಾಗ್ಯೂ, ಮಹಾರಾಷ್ಟ್ರ ಶಿಕ್ಷಣ ಕಾರ್ಯದರ್ಶಿ ರಂಜಿತ್ ಸಿಂಗ್ ಡಿಯೋಲ್, ಈ ಯೋಜನೆಗಾಗಿ ರೋಹಿತ್ ಆರ್ಯ ಅವರಿಗೆ 2 ಕೋಟಿ ರೂ.ಗಳನ್ನು ಪಾವತಿಸಲು ಯಾವುದೇ ಒಪ್ಪಂದವಿಲ್ಲ ಎಂದು ಸ್ಪಷ್ಟಪಡಿಸಿದರು. ” ಆರ್ಯ ತನ್ನ ಅಭಿಯಾನಕ್ಕೆ ಸ್ವಯಂಸೇವಕರಾಗಿ ಕೆಲಸ ಮಾಡಿದ್ದಲ್ಲದೆ, ಅವರ ಆ ಕೆಲಸಕ್ಕೆ ಪ್ರಮಾಣಪತ್ರವನ್ನು ನೀಡಲಾಯಿತು. ತರುವಾಯ, ಅವರು ‘ಮೈ ಸ್ಕೂಲ್, ಬ್ಯೂಟಿಫುಲ್ ಸ್ಕೂಲ್’ ಕಾರ್ಯಕ್ರಮವನ್ನು ಜಾರಿಗೆ ತರಲು ಸರ್ಕಾರದೊಂದಿಗೆ ಚರ್ಚೆ‌ ನಡೆಸಿದ್ದನು, ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಮಹಾರಾಷ್ಟ್ರ ಸರ್ಕಾರವು ರೋಹಿತ್ ಆರ್ಯ ಅವರಿಗೆ ಯಾವುದೇ ಬಾಕಿ ಹಣವನ್ನು ನೀಡಬೇಕಾಗಿಲ್ಲ” ಎಂದು ಡಿಯೋಲ್ ಹೇಳಿದ್ದಾರೆ.

error: Content is protected !!