ಕೆರೆಗೆ ಜಾರಿ ಬಿದ್ದು ಸಹೋದರರ ಸಾ*ವು

ಹಾಸನ : ದನ ಮೇಯಿಸಲು ತೆರಳಿದ ಸಹೋದರರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹಾಸನ ತಾಲೂಕಿನ ದುದ್ದ ಹೋಬಳಿಯ ವಳಗೇರಹಳ್ಳಿ ಗ್ರಾಮದಲ್ಲಿ ನಡೆದಿದೆ.

ವಳಗೇರಹಳ್ಳಿ ಗ್ರಾಮದ ನಿವಾಸಿ ದರ್ಶನ್ (17) ಮತ್ತು ಲಕ್ಷ್ಮೀಕಾಂತ (5) ಮೃತ ಸಹೋದರರು.

ಬುಧವಾರ ಬೆಳಗ್ಗೆ ದನ ಮೇಯಿಸಲು ತೆರಳಿದ ಸಹೋದರರು ಮನೆಗೆ ವಾಪಾಸಾಗದ ಹಿನ್ನೆಲೆ ಪೋಷಕರು ರಾತ್ರಿ ದುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಗುರುವಾರ ಬೆಳಗ್ಗೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮದಲ್ಲಿನ ಕೆರೆಯಲ್ಲಿ ಶೋಧ ಕಾರ್ಯ ಕೈಗೊಂಡ ವೇಳೆ ಸಹೋದರರ ಮೃತದೇಹಗಳು ಪತ್ತೆಯಾಗಿವೆ. ಮೃತದೇಹಗಳನ್ನು ಕೆರೆಯಿಂದ ಹೊರತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!