ಸುರತ್ಕಲ್: ಕೃಷ್ಣಾಪುರದ ಯುವತಿಯೋರ್ವಳು ನಾಪತ್ತೆಯಾದ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರತ್ಕಲ್ ಕೃಷ್ಣಾಪುರ ನಿವಾಸಿ ಅನನ್ಯ(20) ನಾಪತ್ತೆಯಾದ ಯುವತಿ.
ಅ.25ರಂದು ತಂದೆ-ತಾಯಿ ಕೆಲಸದ ನಿಮಿತ್ತ ಮನೆಯಿಂದ ಹೊರ ಹೋಗಿದ್ದು, ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಮಗಳು ಇಲ್ಲದೇ ಇದ್ದು ಆಸುಪಾಸಿನಲ್ಲಿ ವಿಚಾರಿಸಿಕೊಂಡಾಗ ಅನನ್ಯಳು ಬೆಳಗ್ಗೆ ಮನೆಯಿಂದ ಹೋಗಿರುವುದಾಗಿ ತಿಳಿದು ಬಂದಿರುತ್ತದೆ.

ನಾಪತ್ತೆಯಾದ ಯುವತಿಯ ಕುರಿತು ಮಾಹಿತಿ ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.