ಬಜ್ಪೆ: ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಯೆಲ್ಲ ಜಾಲಾಡಿ ಬರಿಗೈಯಲ್ಲಿ ಮರಳಿರುವ ಘಟನೆ ಪೆರ್ಮುದೆ ಬಂಡಸಾಲೆಯ ಬಳಿ ನಡೆದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಶಿಕ್ಷಕಿ ಶೋಭಾ ಬ್ರಿಟೋ ಅವರು ಅ.22ರಂದು ತಾಯಿಯ ಮನೆಗೆ ತೆರಳಿದ್ದಾಗ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಕಳ್ಳರು ರಾತ್ರಿ 10ರಿಂದ 11ರ ವರೆಗೆ ಮನೆಯಲ್ಲಿ ಅಡ್ಡಾಡುತ್ತಿರುವಂತಹ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ.

ಶಿಕ್ಷಕಿ ಅ.23ರಂದು ಸಂಜೆ ಶಾಲೆಯಿಂದ ಮನೆಗೆ ಬಂದಾಗ ಈ ಕಳವು ಬಗ್ಗೆ ಮಾಹಿತಿ ತಿಳಿದು ಬಂದಿದೆ. ಮನೆಯೆಲ್ಲ ಜಾಲಾಡಿದ ಕಳ್ಳರಿಗೆ ಯಾವುದೇ ಆಭರಣ ಸಿಗದಿರುವುದು ಹಾಗೂ ಅಲ್ಲಿದ್ದ ಲ್ಯಾಪ್‌ಟಾಪ್‌ನ್ನು ಕಳವು ಮಾಡದೇ ಇರುವುದು ಕಂಡು ಬಂದಿದೆ. ಅ.23ರಂದು ರಾತ್ರಿ ಅಲ್ಲಿಯೇ ಪಕ್ಕದ ಗುಜರಿ ಅಂಗಡಿಯ ಶಟರ್‌ನ್ನು ಮುರಿಯಲು ಕೂಡ ಯತ್ನಿಸಲಾಗಿದೆ.