ಹಳೆಯಂಗಡಿ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಮೈಸೇವಾ ಭಾರತ್ ದಕ್ಷಿಣ ಕನ್ನಡ ಜಿಲ್ಲೆ, ಶ್ರೀ ವಿದ್ಯಾ ವಿನಾಯಕ ಯುವಕ ಮಂಡಳಿ (ರಿ.) ಹಾಗೂ ಶ್ರೀ ವಿದ್ಯಾ ವಿನಾಯಕ ರಾಜ್ಯ ಸೇವಾ ಟ್ರಸ್ಟ್ (ರಿ.), ಹಳೆಯಂಗಡಿ ಅವರ ಸಂಯುಕ್ತ ಆಶ್ರಯದಲ್ಲಿ ‘ಹಳೆಯಂಗಡಿ ಸೀವಾಕ್ ರನ್ – ನಮ್ಮ ಕರಾವಳಿ, ನಮ್ಮ ಉಸಿರು’ ಶೀರ್ಷಿಕೆಯಲ್ಲಿ ವಿಶಿಷ್ಟ ಸೀವಾಕ್ ರನ್ ಕಾರ್ಯಕ್ರಮ ನವೆಂಬರ್ 2, 2025ರಂದು ಬೆಳಗ್ಗೆ 5.30ರಿಂದ ಹಳೆಯಂಗಡಿ ಶ್ರೀ ವಿದ್ಯಾ ವಿನಾಯಕ ಯುವಕ ಸಂಘದ ಆವರಣದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಸುರತ್ಕಲ್ ಬೀಚ್ ರನ್ನರ್ಸ್ (SBR) ಸಹಯೋಗದಲ್ಲಿ ಆಯೋಜಿಸಲಾಗಿದೆ. 5 ಕಿಮೀ ಹಾಗೂ 10 ಕಿಮೀ ವಿಭಾಗಗಳಲ್ಲಿ ಓಟ ನಡೆಯಲಿದ್ದು, ಸೀಮಿತ ಸ್ಥಾನಗಳು ಮಾತ್ರ ಲಭ್ಯವಿರುತ್ತವೆ. ಪ್ರಥಮ ಐದು ಫಿನಿಷರ್‌ಗಳಿಗೆ ನಗದು ಬಹುಮಾನಗಳು ನೀಡಲಾಗುತ್ತವೆ. ಭಾಗವಹಿಸುವವರಿಗೆ ಉಚಿತ ಉಪಾಹಾರ, ಹೈಡ್ರೇಷನ್ ಸೌಲಭ್ಯ ಮತ್ತು ಫಿನಿಷರ್ ಪದಕಗಳ ವ್ಯವಸ್ಥೆ ಮಾಡಲಾಗಿದೆ. ನೋಂದಣಿಗೆ ರೂ.100/- ಶುಲ್ಕ ನಿಗದಿಯಾಗಿದೆ.
ಸಂಪರ್ಕ ಸಂಖ್ಯೆ:9591510579 / 9980769762 / 9880093053
ಸರ್ಕಾರದ ಪ್ರಥಮ ದರ್ಜೆ ಕಾಲೇಜು, ಹಳೆಯಂಗಡಿ, ಯುವತಿ ಮತ್ತು ಮಹಿಳಾ ಮಂಡಳ (ರಿ.), ಹಳೆಯಂಗಡಿ ಸಂಸ್ಥೆಗಳು ಸಹಯೋಗ ಪಡೆದುಕೊಂಡಿದೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್ ದಕ್ಷಿಣ ಕನ್ನಡ ಜಿಲ್ಲೆ, ಶ್ರೀ ವಿದ್ಯಾ ವಿನಾಯಕ ಯುವಕ ಮಂಡಳಿ (ರಿ.) ಹಾಗೂ ಶ್ರೀ ವಿದ್ಯಾ ವಿನಾಯಕ ರಾಜ್ಯ ಸೇವಾ ಟ್ರಸ್ಟ್ (ರಿ.), ಹಳೆಯಂಗಡಿ. ಕಾರ್ಯಕ್ರಮವನ್ನು ಆಯೋಜಿಸಿದೆ.

