ಮೂಲ್ಕಿ: ಧಾರ್ಮಿಕ ದತ್ತಿ ಇಲಾಖೆ ಇವರ ಆದೇಶದಂತೆ ತೋಕೂರು ಹಳೆಯಂಗಡಿಯಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೀಪಾವಳಿ ಹಿನ್ನಲೆಯಲ್ಲಿ, ಗೋವುಗಳಿಗೆ ಅರಶಿನ ಕುಂಕುಮ ಹೂಗಳಿಂದ ಅಲಂಕರಿಸಿ ಹಿಂಡಿ, ಬೆಲ್ಲ, ಹಣ್ಣು ಹಂಪಲುಗಳಿಂದ ಗೋಗ್ರಾಸವನ್ನು ನೀಡಿ ಗೋಪೂಜಾ ಕಾರ್ಯಾಕ್ರಮವನ್ನು ಬುಧವಾರ(ಅ.22) ಸಂಜೆ 6.00 ಕ್ಕೆ ದೇವಳದ ಪ್ರಧಾನ ಅರ್ಚಕರಾದ ಟಿ ಕೆ ಮಧುಸೂಧನ್ ಆಚಾರ್ ನೆರವೇರಿಸಿದರು.


ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಗುರುರಾಜ್ ಎಸ್ ಪೂಜಾರಿ, ಸದಸ್ಯರಾದ ಪುರುಷೋತ್ತಮ ಕೋಟ್ಯಾನ್, ಸವಿತಾ ಬೆಳ್ಳಾಯರು, ಶೋಭಾ ವಿ ಅಂಚನ್ ಮತ್ತು ಗ್ರಾಮಸ್ಥರು, ಭಕ್ತರು,ಉಪಸ್ಥಿತರಿದ್ದರು.