ತಾಲಿಬಾನ್‌ ಮಂತ್ರಿಯಿಂದ ಪುರುಷರಿಗಷ್ಟೇ ಪತ್ರಿಕಾಗೋಷ್ಠಿ: ಟಿಎಂಸಿ ಸಂಸದೆ ಕೆಂಡ

ನವದೆಹಲಿ: ತಾಲಿಬಾನ್‌ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಅವರು ದೆಹಲಿಯಲ್ಲಿ ನಡೆಸಿದ “ಪುರುಷರಿ ಪತ್ರಕರ್ತರಿಗಷ್ಟೇ” ಪತ್ರಿಕಾಗೋಷ್ಠಿ ರಾಜಕೀಯ ವಲಯದಲ್ಲಿ ಹೊಸ ವಿವಾದವನ್ನು ಎಬ್ಬಿಸಿದೆ. ಟಿಎಂಸಿ ಸಂಸದೆಯಾದ ಮಹುವಾ ಮೊಯಿತ್ರಾ ಈ ಘಟನೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳಾ ಪತ್ರಕರ್ತರನ್ನು ಪತ್ರಿಕಾಗೋಷ್ಠಿಗೆ ಪ್ರವೇಶಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ, ಮಹುವಾ ಮೊಯಿತ್ರಾ “ಇದು ಭಾರತದ ಗೌರವಕ್ಕೆ ಕಪ್ಪು ಚುಕ್ಕಿ ಇಟ್ಟ ಘಟನೆ” ಎಂದು ಆರೋಪಿಸಿ, ವಿದೇಶಾಂಗ ಸಚಿವ ಎಸ್. ಜೈಶಂಕರರ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.

ಅವರು ಸಾಮಾಜಿಕ ಜಾಲತಾಣ X (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿ — “ ಭಾರತದ ಭೂಮಿಯಲ್ಲಿ ಮಹಿಳಾ ಪತ್ರಕರ್ತರಿಗೆ ನಿಷೇಧ ಹೇಗೆ ಸಾಧ್ಯ? ತಾಲಿಬಾನ್ ಮುಂದೆ ಭಾರತ ತಲೆಬಾಗಿದೆಯೇ?”
ಎಂದು ಪ್ರಶ್ನಿಸಿದ್ದಾರೆ.

ತಾಲಿಬಾನ್‌ ಮಂತ್ರಿಯ ನಡೆ ಭಾರತದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿಪಕ್ಷಗಳು ಇದನ್ನು “ಮಹಿಳಾ ಹಕ್ಕುಗಳು ಮತ್ತು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ನೇರ ದಾಳಿ” ಎಂದು ವ್ಯಾಖ್ಯಾನಿಸಿದ್ದು, ಸರ್ಕಾರದ ಮೌನವನ್ನು “ ಟೀಕಿಸುತ್ತಿವೆ.

ಘಟನೆ ಕುರಿತಂತೆ ವಿದೇಶಾಂಗ ಸಚಿವಾಲಯದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ.

error: Content is protected !!