ಮಂಗಳೂರು: ಬಿದ್ದು ಸಿಕ್ಕಿದ ಚಿನ್ನದ ಪೆಂಡೆಂಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಸ್ಕೂಲ್ ಸೆಕ್ಯೂರಿಟಿ ಗಾರ್ಡ್!

ಮಂಗಳೂರು: ಇಲ್ಲಿನ ಬೆಂದೂರ್ ನಲ್ಲಿರುವ ಸಂತ ತೆರೇಸಾ ಸ್ಕೂಲ್ ಸೆಕ್ಯೂರಿಟಿ ಗಾರ್ಡ್ ಒಬ್ಬರು ತಮಗೆ ಸಿಕ್ಕ ಚಿನ್ನದ ಪೆಂಡೆಂಟ್ ಅನ್ನು ವಾರಿಸುದಾರರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.


ಸಂಜೆ 4:30 ಗಂಟೆಯ ಸುಮಾರಿಗೆ ಸಂತ ತೆರೇಸಾ ಸ್ಕೂಲ್ ಗೆ ಮಗಳನ್ನು ಕರೆತರಲು ಹೋಗಿದ್ದ ವೇಳೆ ಮಹಿಳೆಯೊಬ್ಬರ 5 ಗ್ರಾಂ. ತೂಕದ ಚಿನ್ನದ ಪೆಂಡೆಂಟ್ ಕಳೆದುಹೋಗಿತ್ತು. ಅದು ಸ್ಕೂಲ್ ಸೆಕ್ಯೂರಿಟಿ ಗಾರ್ಡ್ ಆಗಿರುವ ಶಿವಾನಂದ್ ಅವರಿಗೆ ಸಿಕ್ಕಿದ್ದು ಅದನ್ನು ಮರಳಿಸಿದ್ದಾರೆ.
ಈಗಿನ ಕಾಲದಲ್ಲಿ ಮಾನವೀಯತೆ ಮರೆತ ಜನರ ಮಧ್ಯೆ ಸೆಕ್ಯೂರಿಟಿ ಗಾರ್ಡ್ ಒಬ್ಬರ ಮಾನವೀಯ ಗುಣಗಳು ಸರ್ವರ ಪ್ರಶಂಸೆಗೆ ಪಾತ್ರವಾಗಿದೆ.

error: Content is protected !!