ಕನಕಪುರ: ಭದ್ರೆ ಗೌಡನದೊಡ್ಡಿ ಊರ ಮುಂದಿರುವ ಕೆರೆಯ ಬಳಿ ರೌಡಿಶೀಟರ್‌ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಮಂಗಳವಾರ(ಅ.7) ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಬುಧವಾರ ಶವ ಪತ್ತೆಯಾಗಿದೆ.
ಬೆಂಗಳೂರಿನ ಎಮ್ಮಿಗೆ ಪುರದ ಚಿರಂಜೀವಿ (25) ಕೊಲೆಯಾಗಿರುವ ರೌಡಿಶೀಟರ್.
ಚಿರಂಜೀವಿ ಕಗ್ಗಲಿಪುರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದು, ಕೊಲೆ ಪ್ರಕರಣವೊಂದರಲ್ಲಿ ಇತ್ತೀಚೆಗೆ ಬಂಧಿಸಲಾಗಿತ್ತು. ಜಾಮೀನು ಪಡೆದು ಹೊರಬಂದು ಹಾರೋಹಳ್ಳಿ ತಾಲೂಕಿನ ತನ್ನ ಅಜ್ಜಿಯ ಮನೆ ಭದ್ರೆಗೌಡನದೊಡ್ಡಿ ಗ್ರಾಮದಲ್ಲಿದ್ದ ಚಿರಂಜೀವಿ, ಇತ್ತೀಚೆಗೆ ಚಿಕ್ಕ ಕಲ್ಬಾಳು ಗ್ರಾಮದಲ್ಲಿ ಗಲಾಟೆ ಮಾಡಿಕೊಂಡಿದ್ದ. ಬೆಂಗಳೂರಿನಲ್ಲಿ ನಡೆದಿದ್ದ ಕೊಲೆ ಮತ್ತು ಚಿಕ್ಕ ಕಲ್ಬಾಳು ಗ್ರಾಮದಲ್ಲಿ ನಡೆದಿದ್ದ ಗಲಾಟೆ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಎಸ್.ಪಿ. ಶ್ರೀನಿವಾಸ ಗೌಡ, ಎಎಸ್ಪಿ ರಾಮಚಂದ್ರಯ್ಯ, ಡಿಎಸ್ಪಿ ಗಿರಿ, ಕನಕಪುರ ಸರ್ಕಲ್ ಇನ್ಸ್‌ಪೆಕ್ಟರ್ ವಿಕಾಸ್ ಗೌಡ, ಸಬ್ ಇನ್‌ಸ್ಪೆಕ್ಟರ್‌ಆಕಾಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.