ಕಾಸರಗೋಡು: ಮಂಜೇಶ್ವರ ತಾಲ್ಲೂಕಿನ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಅರಿಮಲ ವಾರ್ಡ್‌ನ ಕಡಂಬಾರ್ ಗ್ರಾಮದಲ್ಲಿ ಸೋಮವಾರ ಸಂಜೆ ಒಂದು ವರ್ಷದ ಮಗನ ಪೋಷಕರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಸ್ಪಷ್ಟ ಕಾರಣ ಇನ್ನೂ ಬಹಿರಂಗಗೊಂಡಿಲ್ಲ.
ಮೃತರನ್ನು ಅಜಿತ್ (30) ಮತ್ತು ಶ್ವೇತಾ (27) ಎಂದು ಗುರುತಿಸಲಾಗಿದೆ. ಅಜಿತ್ ಮನೆ ಬಣ್ಣ ಬಳಿಯುವ ಮತ್ತು ಪೆಂಡಲ್ ಡೆಕೋರೇಟರ್ ಆಗಿ ಕೆಲಸ ಮಾಡುತ್ತಿದ್ದರು, ಶ್ವೇತಾ ವೋರ್ಕಾಡಿಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಆಗಿದ್ದರು.
ಪೊಲೀಸರಿಂದ ತಿಳಿದಂತೆ, ಸೋಮವಾರ ಸಂಜೆ ದಂಪತಿ ತಮ್ಮ ಮಗನನ್ನು ಶ್ವೇತಾ ಅವರ ಸಹೋದರಿಯ ಬಳಿ ಬಿಟ್ಟು ಹೋಗಬೇಕು ಎಂದು ಹೇಳಿ ಹೊರಟು ನಂತರ ಸಂಜೆ 5 ಗಂಟೆಯ ಸುಮಾರಿಗೆ ಮನೆಗೆ ಹಿಂತಿರುಗಿ ವಿಷ ಸೇವಿಸಿದರು. ಅಜಿತ್ ಅವರ ತಾಯಿ ಪ್ರಮೀಳಾ (60) ಆ ಸಮಯದಲ್ಲಿ ಮನೆಯಲ್ಲಿರಲಿಲ್ಲ.
ಮನೆಯಿಂದ ಗದ್ದಲ ಕೇಳಿ ನೆರೆಹೊರೆಯವರು ಬಂದಾಗ ದಂಪತಿ ಸಂಕಷ್ಟದಲ್ಲಿ ಸಿಲುಕಿರುವುದನ್ನು ಕಂಡು ಅವರನ್ನು ತಕ್ಷಣ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದರು. ಅಜಿತ್ ಬೆಳಗಿನ ಜಾವ 12:30ರ ಸುಮಾರಿಗೆ ಮೃತಪಟ್ಟರು, ಶ್ವೇತಾ ಮಂಗಳವಾರ ಬೆಳಗಿನ ಜಾವ ನಿಧನರಾದರು.
ಅರಿಮಲ ವಾರ್ಡ್ ಸದಸ್ಯೆ ಜಯಂತಿ ಯತೀಶ್ ಈ ಕೃತ್ಯಕ್ಕೆ ಆರ್ಥಿಕ ಸಂಕಟ ಕಾರಣವಾಗಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಆದರೂ, ಪೊಲೀಸರು ಈ ವಿಷಯವನ್ನು ಇನ್ನೂ ದೃಢಪಡಿಸಿಲ್ಲ. ಮಂಜೇಶ್ವರ ಪೊಲೀಸರು “ಅಧಿಕಾರಿಗಳು ವಿಚಾರಣೆ ನಡೆಸಲು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.” ಎಂದು ತಿಳಿಸಿದ್ದಾಎಎ.
ಅಜಿತ್ ಅವರ ಸೋದರ ಮಾವ ಹೇಳಿದಂತೆ, ಕುಟುಂಬವು ಸಹಕಾರಿ ಬ್ಯಾಂಕಿನಿಂದ ಪಡೆದ ಸಾಲವನ್ನು ನಿಯಮಿತವಾಗಿ ತೀರಿಸುತ್ತಿತ್ತು ಮತ್ತು ಯಾವುದೇ ಕಂತು ಬಾಕಿ ಆಗಿಲ್ಲ ಎಂದಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.