ಬಜ್ಪೆ: ವೈದ್ಯನಾಥ ಗೇಮ್ಸ್ ಕ್ಲಬ್ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ವೆಂಕಟೇಶ್ ಅಮೀನ್ ಆಯ್ಕೆ

ಬಜಪೆ: ವೈದ್ಯನಾಥ ಗೇಮ್ಸ್ ಕ್ಲಬ್, ಸಿದ್ಧಾರ್ಥನಗರ, ಬಜ್ಪೆಯ 2025-26 ಸಾಲಿನ ಹೊಸ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ವೆಂಕಟೇಶ್ ಅಮೀನ್ ಅವರು ಆಯ್ಕೆಯಾಗಿದ್ದಾರೆ.

ನೂತನ ಉಪಾಧ್ಯಕ್ಷರಾಗಿ ಬಾಲಕೃಷ್ಣ ಕೋಟ್ಯಾನ್, ಕಾರ್ಯದರ್ಶಿಯಾಗಿ ಲೋಕೇಶ್ ಎಂ. ಬಿ. ಮತ್ತು ಖಜಾಂಚಿಯಾಗಿ ಉದಯ್ ಪದಕಣ್ಣಯ ಅವರು ಕರ್ತವ್ಯ ನಿರ್ವಹಿಸಲಿದ್ದಾರೆ.

ಕಾರ್ಯಕಾರಿ ಸಮಿತಿಯ ಇತರ ಸದಸ್ಯರಾಗಿ ನಾಗೇಶ್ ಸಾಲ್ಯಾನ್, ಹರೀಶ್ ಕಾಂಚನ್, ಚಂದ್ರಹಾಸ್ ಅಮೀನ್, ಅಶೋಕ್ ಸಾಲ್ಯಾನ್ ಮತ್ತು ಸುರೇಶ್ ಕುಂದರ್ ಅವರು ಆಯ್ಕೆಯಾಗಿದ್ದಾರೆ.

error: Content is protected !!