ಅ.9ಕ್ಕೆ “ತಾಲಿಬಾನ್” ಮುಖಂಡ ಎರಡು ದಿನಗಳ ಭಾರತ ಭೇಟಿ, ಕೇಂದ್ರ ಸಚಿವರ ಜೊತೆ ಚರ್ಚೆ!!

ಹೊಸದಿಲ್ಲಿ: ಉಭಯ ದೇಶಗಳ ಸಂಬಂಧ ಬಲಗೊಳಿಸುವತ್ತ ಐತಿಹಾಸಿಕ ಹೆಜ್ಜೆಯಲಿಡುವತ್ತ ಭಾರತ ಇದೇ ಮೊದಲ ಬಾರಿಗೆ ನಿರ್ಧರಿಸಿದೆ. ತಾಲಿಬಾನ್ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವ ಅಮೀರ್ ಖಾನ್ ಮುತ್ತಖಿ ಅಕ್ಟೋಬರ್ 9ರಂದು ಭಾರತಕ್ಕೆ ಎರಡು ದಿನಗಳ ಭೇಟಿಗೆ ಆಗಮಿಸುವ ನಿರೀಕ್ಷೆ ಇದೆ.

ಭಾರತವು ಅಫ್ಘಾನಿಸ್ತಾನಕ್ಕೆ ಕಳೆದ ಕೆಲವು ವರ್ಷಗಳಿಂದ ಮಾನವೀಯ ನೆರವು ನೀಡುತ್ತಿದ್ದರೂ, ಇದೀಗ ಮೊದಲ ಬಾರಿಗೆ ದೇಶದ ಜತೆಗಿನ ಸಂಬಂಧ ಬಲಗೊಳಿಸಲು ಮುಂದಾಗಿದೆ.

ದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಅವರನ್ನು ಮುತ್ತಖಿ ಭೇಟಿಯಾಗಲಿದ್ದಾರೆ. 2021ರಲ್ಲಿ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತಕ್ಕೆ ಉನ್ನತ ಮಟ್ಟದ ತಾಲಿಬಾನ್ ನಾಯಕರ ಭೇಟಿ ಇದೇ ಮೊದಲು ಎಂಬುದು ವಿಶೇಷ.

ಮುತ್ತಖಿ ಭೇಟಿಗೆ ಸಂಬಂಧಿಸಿದ ಮಾತುಕತೆ ಕಳೆದ ಆಗಸ್ಟ್‌ನಿಂದಲೇ ನಡೆಯುತ್ತಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇರಿದ್ದ ಪ್ರಯಾಣ ನಿಷೇಧವೇ ವಿಳಂಬಕ್ಕೆ ಕಾರಣವಾಗಿತ್ತು. ಭಾರತ ಮನವಿ ಮಾಡಿದ ನಂತರ ನಿಷೇಧವನ್ನು ಸಡಿಲಗೊಳಿಸಲಾಗಿದ್ದು, ಇದೀಗ ದಿನಾಂಕ ನಿಗದಿಯಾಗಿದೆ ಎಂದು ಉನ್ನತ ಸರ್ಕಾರಿ ಮೂಲಗಳು ತಿಳಿಸಿವೆ.

ತಾಲಿಬಾನ್ ಸರ್ಕಾರಕ್ಕೆ ಭಾರತ ಇನ್ನೂ ಅಧಿಕೃತ ಮಾನ್ಯತೆ ನೀಡದಿದ್ದರೂ, ಈ ಭೇಟಿ ಉಭಯ ದೇಶಗಳ ಸಂಬಂಧ ವೃದ್ಧಿಯಲ್ಲಿ ಮಹತ್ವದ ಹೆಜ್ಜೆ ಎನ್ನಲಾಗಿದೆ. ಕಳೆದ ಜನವರಿಯಲ್ಲಿ ದುಬೈನಲ್ಲಿ ಮುತ್ತಖಿ ಹಾಗೂ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ನಡುವೆ ನಡೆದ ಮಾತುಕತೆಯಲ್ಲಿಯೇ ಸಹಕಾರದ ದಾರಿ ತೆರೆಯಲ್ಪಟ್ಟಿತ್ತು. ಬಳಿಕ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ದೂರವಾಣಿ ಸಂಭಾಷಣೆಯಲ್ಲೂ ಪರಸ್ಪರ ಚರ್ಚೆ ನಡೆಸಿದ್ದರು.

error: Content is protected !!