ಮಲೈಕಾ ಅರೋರಾ ಫಿಟ್ ಸಿಕ್ರೆಟ್ ರಿವೀಲ್!

ಬಾಲಿವುಡ್‌ನ ಅತ್ಯಂತ ಫಿಟ್ ಸೆಲೆಬ್ರಿಟಿಗಳಲ್ಲಿ ಒಬ್ಬರಾದ ಮಲೈಕಾ ಅರೋರಾ ಇತ್ತೀಚೆಗೆ ತಮ್ಮ ಕಾಲುಗಳು ಮತ್ತು ಗ್ಲುಟ್‌(ಹಿಂಭಾಗದ ಸ್ನಾಯು‌, ಪೃಷ್ಠ)ಗಳನ್ನು ಬಲಪಡಿಸಲು ಸಹಾಯಕವಾಗುವ ಐದು ಪರಿಣಾಮಕಾರಿ ವ್ಯಾಯಾಮಗಳ ದಿನಚರಿಯನ್ನು ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಫಿಟ್‌ನೆಸ್ ಪ್ರಿಯೆ ಎಂದೇ ಪ್ರಸಿದ್ಧಿ ಪಡೆದಿರುವ ಮಲೈಕಾ, ಈ ವ್ಯಾಯಾಮಗಳನ್ನು ಬ್ಯಾಲೆ ಬ್ಯಾರೆ(ತ್ಯಗಾರರು ಅಭ್ಯಾಸ ಮಾಡುವಾಗ ಬಳಸುವ ಹ್ಯಾಂಡ್ರೈಲ್/ಕಬ್ಬಿಣದ ಕಂಬ.)ಯೊಂದಿಗೆ ನಡೆಸಿದ್ದು, ಮನೆಯಲ್ಲಿ ಇದೇ ರೀತಿಯ ಉಪಕರಣಗಳಿದ್ದರೆ ಯಾರೂ ಸಹ ಅನುಸರಿಸಬಹುದಾಗಿದೆ.

ಮಲೈಕಾ ಶಿಫಾರಸು ಮಾಡಿದ ಐದು ವ್ಯಾಯಾಮಗಳು

ಸುಮೋ ಸ್ಕ್ವಾಟ್ + ಹೀಲ್ ರೈಸಸ್ – ಸೊಂಟದ ಕೆಳಗಿನ ಭಾಗವನ್ನು ಬಲಪಡಿಸಿ, ಕಾಲು ಮತ್ತು ಹಿಂಭಾಗದ ಸ್ನಾಯುಗಳನ್ನು ಗಟ್ಟಿಗೊಳಿಸುತ್ತದೆ.
ಲೆಗ್ ಕಿಕ್‌ಬ್ಯಾಕ್ – ಗ್ಲುಟ್ ಮತ್ತು ಕಾಲುಗಳನ್ನು ಬಲಪಡಿಸುವುದರ ಜೊತೆಗೆ ಸ್ಥಿರತೆಯನ್ನು ಹೆಚ್ಚಿಸುತ್ತದೆ.

ಸ್ಕ್ವಾಟ್‌ಗಳು– ತೊಡೆಯ ಮುಂಭಾಗದ ಕ್ವಾಡ್ರೈಸೆಪ್ಸ್ ಸ್ನಾಯುಗಳನ್ನು ಗುರಿಯಾಗಿಸಿಕೊಂಡು ನಡೆಯುವುದು, ಓಡುವುದು, ಜಿಗಿಯುವಂತಹ ದೈನಂದಿನ ಚಟುವಟಿಕೆಗಳಿಗೆ ಸಹಕಾರಿಯಾಗುತ್ತದೆ.

ಕಾಫ್ ರೈಸಸ್‌ನೊಂದಿಗೆ ಸ್ಕ್ವಾಟ್– ಕಾಲು ಮತ್ತು ಗ್ಲುಟ್ ಟೋನಿಂಗ್ ಜೊತೆಗೆ ಕಾಫ್ ಸ್ನಾಯುಗಳನ್ನು ಬಲಪಡಿಸುತ್ತದೆ; ಶಕ್ತಿ ಮತ್ತು ಸಮತೋಲನವನ್ನು ಸುಧಾರಿಸುತ್ತದೆ.
ಸೈಡ್ ಲೆಗ್ ಕಿಕ್ + ಕರ್ಟ್ಸಿ ಲಂಜ್ – ಸ್ವಲ್ಪ ಕಠಿಣವಾದರೂ ಸ್ಥಿರತೆ, ಸಮತೋಲನ ಮತ್ತು ನಮ್ಯತೆಯನ್ನು ಬೆಳೆಸುತ್ತದೆ.

ಲೆಗ್ ಡೇ ಏಕೆ ಮುಖ್ಯ?
ಅನೆಕರಿಗೆ ಲೆಗ್ ವರ್ಕೌಟ್‌ಗಳು ಕಷ್ಟಕರವಾಗಿದೆಯೆಂದು ಭಾಸವಾದರೂ, ಅವುಗಳನ್ನು ನಿರ್ಲಕ್ಷಿಸುವಂತಿಲ್ಲ. ಹೆಲ್ತ್‌ಲೈನ್ ಪ್ರಕಾರ, ಲೆಗ್ ವರ್ಕೌಟ್‌ಗಳು ದೇಹದ ಸಮತೋಲನ, ಶಕ್ತಿ, ವೇಗ ಮತ್ತು ಸ್ಥಿರತೆಯನ್ನು ನಿರ್ಮಿಸಲು ನೆರವಾಗುತ್ತವೆ. ಕಾಲು ಸ್ನಾಯುಗಳು ಒಟ್ಟಾರೆ ಫಿಟ್‌ನೆಸ್‌ನ ಅವಿಭಾಜ್ಯ ಅಂಗವಾಗಿದ್ದು, ಆರೋಗ್ಯಕರ ದೇಹಕ್ಕಾಗಿ ಅವುಗಳ ವ್ಯಾಯಾಮ ಅತೀ ಮುಖ್ಯ.

ಮಲೈಕಾ ಅರೋರಾ ಶಿಫಾರಸು ಮಾಡಿದ ಈ ವ್ಯಾಯಾಮಗಳು ಕಾಲು ಮತ್ತು ಪೃಷ್ಠವನ್ನು ಬಲಪಡಿಸಲು ಬಯಸುವವರಿಗೆ ಉಪಯುಕ್ತ. ಆದರೆ ಹೊಸ ವ್ಯಾಯಾಮಗಳನ್ನು ಪ್ರಾರಂಭಿಸುವ ಮೊದಲು ವೈದ್ಯಕೀಯ ಸಲಹೆ ಪಡೆಯುವುದು ಒಳಿತು.

ಪ್ರತೀ ದಿನ ಸಮತೋಲಿತ ಆಹಾರ, ಅಗತ್ಯಕ್ಕೆ ತಕ್ಕಂತೆ, ಯೋಗ, ವ್ಯಾಯಾಮ, ಪ್ರಾಣಾಯಾಮ ಮಾಡುವ ಮೂಲಕ ಅರೋಪ ಈ ಇಳಿ ವಯಸ್ಸಲ್ಲೂ ಹದಿಹರೆಯದ ಹುಡುಗಿಯರನ್ನು ನಾಚಿಸುವಷ್ಟು ಸುಂದರಿಯಾಗಿ ಕಾಣುತ್ತಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ

 

 

 

 

error: Content is protected !!