ಹೊಸದಿಲ್ಲಿ: ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದ ಭಾರತ ತಂಡವನ್ನು ಹಾರ್ದಿಕವಾಗಿಪ್ರಧಾನಿ ಪ್ರದಾನಿ ಮೋದಿ ಅಭಿನಂದಿಸಿದ್ದಾರೆ. ತಮ್ಮ ಎಕ್ಸ್ (Twitter) ಖಾತೆಯ ಮೂಲಕ ಅವರು ಈ ಗೆಲುವನ್ನು “ಆಪರೇಷನ್ ಸಿಂಧೂರ” ಕಾರ್ಯಾಚರಣೆಗೆ ಹೋಲಿಸಿದ್ದಾರೆ. “ಫಲಿತಾಂಶ ಅದೇ ಆಗಿದೆ; ಭಾರತ ಗೆದ್ದಿದೆ” ಎಂದು ಬಣ್ಣಿಸಿದ್ದಾರೆ.
“ಮೈದಾನದಲ್ಲಿ ಆಪರೇಷನ್ ಸಿಂಧೂರ. ಫಲಿತಾಂಶ ಅದೇ- ಭಾರತದ ಗೆಲುವು! ನಮ್ಮ ಕ್ರಿಕೆಟಿಗರಿಗೆ ಅಭಿನಂದನೆಗಳು” ಎಂದು ಎಕ್ಸ್ ಖಾತೆಯಲ್ಲಿ ಮೋದಿ ಪೋಸ್ಟ್ ಮಾಡಿದ್ದಾರೆ.
ಭಾರತ ಕಳೆದ ಮೇ ತಿಂಗಳಲ್ಲಿ ಪಾಕಿಸ್ತಾನದ ಉಗ್ರರ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದ್ದು, ಈ ಹಿನ್ನೆಲೆಯಲ್ಲಿ ಏಷ್ಯಾದ ಬದ್ಧ ಪ್ರತಿಸ್ಪರ್ಧಿಗಳ ನಡುವಿನ ಕ್ರಿಕೆಟ್ ಕಾಳಗ ವಿಶೇಷ ಮಹತ್ವ ಪಡೆದಿತ್ತು. ಸಂಬಂಧ ಹದಗೆಟ್ಟಿರುವ ಸಂದರ್ಭದಲ್ಲಿ ಪಾಕಿಸ್ತಾನದ ಜತೆಗೆ ಭಾರತ ತಂಡ ಆಡುವುದಕ್ಕೆ ಹಲವು ಮಂದಿ ಅಭಿಮಾನಿಗಳು ಹಾಗೂ ವಿರೋಧ ಪಕ್ಷದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು.
ನಾಟಕೀಯ ಫೈನಲ್ ಪಂದ್ಯದಲ್ಲಿ ಭಾರತದ ಕೆಳಮಧ್ಯಮ ಕ್ರಮಾಂಕದ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿ ಗೆಲುವು ತಂದುಕೊಟ್ಟಿದ್ದಾರೆ . ಈ ಐತಿಹಾಸಿಕ ಗೆಲುವನ್ನು ದೇಶಾದ್ಯಂತ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.