ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ, ರೋಟರಾಕ್ಟ್ ಕ್ಲಬ್ ಭುವನೇಂದ್ರ ಕಾಲೇಜು, ರೋಟರಾಕ್ಟ್ ಕ್ಲಬ್ ಸರಕಾರಿ ಪಾಲಿಟೆಕ್ನಿಕ್ ಇವರ ಜಂಟಿ ಆಶ್ರಯದಲ್ಲಿ ಡಾ. ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವರ ಸಹಯೋಗದೊಂದಿಗೆ ವಿಶ್ವ ಹೃದಯ ದಿನಾಚರಣೆಯ ಪ್ರಯುಕ್ತ ಹೃದಯಕ್ಕಾಗಿ ನಡಿಗೆ ಜಾಥವು ಸೆ.28ರಂದು ಬೆಳಿಗ್ಗೆ 7:30ಕ್ಕೆ ಅನಂತಶಯನ ವೃತ್ತ ದಿಂದ ಪ್ರಾರಂಭಗೊಂಡು ರಥಬೀದಿಯಲ್ಲಿ ಸಾಗಿ ಬಂಡಿಮಠ ಮೂಲಕ ಡಾ. ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯಲ್ಲಿ ಕೊನೆಗೊಳ್ಳಲಿದೆ.
ಜಾಥದ ಉದ್ಘಾಟನೆಯನ್ನು ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ರವರು ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಇಲಾಖಾ ಸಿಬ್ಬಂದಿಗಳು ಭಾಗವಹಿಸಲಿರುವರು.
ನಂತರ ನಡೆಯುವ ಸಭಾಕಾರ್ಯಕ್ರಮದಲ್ಲಿ ಕೆ.ಎಂ.ಸಿ ಮಣಿಪಾಲದ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕರಾದ ಡಾ. ಮುರಳೀಧರ್ ಎಂ ಕುಲಕರ್ಣಿಯವರು ಹೃದಯದ ಬಗ್ಗೆ ಮುಖ್ಯ ಭಾಷಣವನ್ನು ಮಾಡಲಿದ್ದಾರೆ. ಕೆಎಂಸಿ ಮಣಿಪಾಲದ ಹೃದ್ರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಾವಿಯೋ ಪಿ.ಡಿʼ ಸೋಜ, ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ. ಭರತೇಶ್ ಆದಿರಾಜ್, ರೋಟರಿ ಸಹಾಯಕ ಗವರ್ನರ್ ರೋ. ಬಿ ವಿಘನೇಶ್ ಶೆಣೈ ಯವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಆಸ್ಪತ್ರೆಯ ಮುಖ್ಯಧಿಕಾರಿ ಡಾ. ಕೀರ್ತಿನಾಥ್ ಬಲ್ಲಾಳ್ ಹಾಗೂ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಅಧ್ಯಕ್ಷ ರೋ. ಸುರೇಂದ್ರ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.