ರಕ್ತ ಪಿಶಾಚಿ, ಸೈತಾನನ ಅಬ್ಬರ: ಟ್ರೇಲರ್‌ನಲ್ಲಿಯೇ ಧೂಳೆಬ್ಬಿಸಿದ ʻಥಾಮಾ’

ಮುಂಬೈ: ಬಾಲಿವುಡ್‌ನಲ್ಲಿ ಹಾರರ್-ಕಾಮಿಡಿ ಪ್ರಕಾರವನ್ನು ಯಶಸ್ವಿಯಾಗಿ ನಿರೂಪಿಸುತ್ತಿರುವ ʻಮ್ಯಾಡಾಕ್ ಫಿಲ್ಮ್ಸ್ʼ ಇದೀಗ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ‘ಸ್ತ್ರೀ 2’ ಮತ್ತು ‘ಮುಂಜ್ಯಾ’ಗಳ ನಂತರ, ಹಾರರ್-ಕಾಮಿಡಿ ಯೂನಿವರ್ಸ್‌ನ ಮುಂದಿನ ಚಿತ್ರ ʻಥಾಮಾ’ದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ.

Rashmika Mandanna Absent from Thamma Trailer Launch - Find Out the Reason

ದೀಪಾವಳಿ ಹಬ್ಬದ ಸಂಭ್ರಮದಲ್ಲಿ, ಅಕ್ಟೋಬರ್ 21ರಂದು ಚಿತ್ರ ಬಿಡುಗಡೆಯಾಗುತ್ತಿದೆ.

Rashmika Mandanna misses Thamma trailer launch due to Cocktail 2 shoot, says "Dinoo sir has me shooting in Sicily now"
ಸೈತಾನ್‌, ರಕ್ತಪಿಶಾಚಿ ಸುತ್ತ ಸುತ್ತುವ ಈ ಚಿತ್ರ 1000 ವರ್ಷ ಹಳೆಯ ದಂತೆ ಕಥೆಯ ಒಂದು ಸ್ಟೋರಿ. ಟ್ರೇಲರ್ ನೋಡಿದಾಗಲೇ, ಪ್ರೇಕ್ಷಕರನ್ನು ಸೆಳೆಯುವ ಹಲವು ಪ್ರಮುಖ ಅಂಶಗಳು ಗೋಚರಿಸುತ್ತವೆ.

Ayushmann Khurrana And Rashmika Mandanna's Thamma Trailer Promises A Thrilling Ride | Glamsham.com | Since 1999

ಹಾಲಿವುಡ್‌ನಲ್ಲಿ ಅನೇಕ ಬಾರಿ ವ್ಯಾಂಪೈರ್ ಪ್ರೇಮ ಕಥೆಗಳು ಕಂಡಿದ್ದರೂ, ಬಾಲಿವುಡ್‌ಗೆ ಇದು ಹೊಸ ಪ್ರಯೋಗ. ಈ ತಾಜಾ ಪ್ರಯತ್ನವೇ ಪ್ರೇಕ್ಷಕರನ್ನು ಸೆಳೆಯಲಿದೆ. ‘ಸ್ತ್ರೀ’ ಮತ್ತು ‘ಭೀತಿಯಾ’ ಪಾತ್ರಗಳು ಕೂಡ ಕಾಣಿಸಿಕೊಳ್ಳುತ್ತವೆ ಎಂಬುದು ಟ್ರೇಲರ್‌ನಲ್ಲಿ ಸೂಚನೆ ಸಿಕಿದ್ದು, ಕುತೂಹಲ ಮೂಡಿಸಿದೆ. ಮ್ಯಾಡಾಕ್‌ನ ಟ್ರೇಡ್‌ಮಾರ್ಕ್ ಶೈಲಿಯ ತೀಕ್ಷ್ಣ ಹಾಸ್ಯ ಚಿತ್ರದಲ್ಲಿಯೂ ಹೇರಳವಾಗಿದ್ದು, ನಗುವೇ ಜನರನ್ನು ಚಿತ್ರಮಂದಿರಕ್ಕೆ ಎಳೆಯಲಿದೆ.

Thama Teaser: Ayushmann Khurrana, Rashmika Mandanna Promise a Dark and Bloody Love Story

ಸ್ಟಾರ್ ಪವರ್ – ನವಾಜುದ್ದೀನ್ ಸಿದ್ದಿಕಿ, ರಶ್ಮಿಕಾ ಮಂದಣ್ಣ ಹಾಗೂ ಆಯುಷ್ಮಾನ್ ಖುರಾನಾ – ರಕ್ತಪಿಶಾಚಿಗಳ ಪಾತ್ರದಲ್ಲಿ ಕಾಣಿಸಿದ್ದು, ಈ ಕಾಸ್ಟಿಂಗ್ ಈಗಾಗಲೇ ಚರ್ಚೆಗೆ ಗ್ರಾಸವಾಗಿದೆ. ಕಾಂತಾರ ಚಾಪ್ಟರ್‌ 1 ಅಬ್ಬರದ ನಡುವೆ ‘ಥಾಮಾ’ಗೆ ಪ್ರತಿಸ್ಪರ್ಧಿಯಾಗಿ ಕಾಣುತ್ತಿದೆ. ಅಕ್ಟೋಬರ್ 21ರಂದು ಬಿಡುಗಡೆಯಾಗುತ್ತಿರುವ ಮತ್ತೊಂದು ದೊಡ್ಡ ಚಿತ್ರವೆಂದರೆ ‘ಏಕ್ ದಿವಾನೇ ಕಿ ದಿವಾನಿಯತ್’.

error: Content is protected !!