ಕಲಬುರಗಿ: ಶುಕ್ರವಾರ ಬೆಳಗಿನ ಜಾವದಿಂದ ಎಡಬಿಡದೇ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನ ಜೀವನ ಭಾರಿ ಅಸ್ತವ್ಯಸ್ತಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಸೆ. 27 ಹಾಗೂ 28 ರಂದು ಶಾಲೆಗಳಿಗೆ ರಜೆ ನೀಡಲು ಕಲಬುರಗಿ ಜಿಲ್ಲಾಡಳಿತ ಘೋಷಿಸಿದೆ.
ಶುಕ್ರವಾರ ಬೆಳಗಿನ ಜಾವ ಶುರುವಾದ ಧಾರಾಕಾರ ಮಳೆ ಶನಿವಾರವೂ ಮುಂದುವರೆದಿದ್ದು, ಸತತ 30 ಗಂಟೆಗಳ ಮಳೆಯಿಂದ ಜನರು ಕಂಗಾಲಾಗಿದ್ದು, ಇಷ್ಟೊಂದು ಮಳೆ ನೋಡಿದ್ದು ಇದೇ ಮೊದಲು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಶಾಲೆಗಳಿಗೆ ದಸರಾ ರಜೆ ಇದ್ದು ಆದರೆ ಕೆಲವು ಶಾಲಾ ಆಡಳಿತ ಮಂಡಳಿಗಳು ದಸರಾ ರಜೆ ವಿನಾಯಿತಿ ಪಡೆದು ಶಾಲೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಈ ರಜಾ ಘೋಷಣೆಯ ಪಾಠ ಬೋಧನೆಯನ್ನು ಮುಂದಿನ ರಜಾ ದಿನಗಳಲ್ಲಿ ಸರಿದೂಗಿಸಲು ಸೂಚಿಸಲಾಗಿದೆ.