ಧರ್ಮಸ್ಥಳ: ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯ ಪ್ರವೇಶದಿಂದಲೇ ಇಂದು ಬೆಳಗ್ಗಿನಿಂದ ಮತ್ತೆ ಶೋಧ ಆರಂಭಗೊಂಡಿದೆ. ವಿಠಲ ಗೌಡ ಇತ್ತೀಚಿಗೆ ಎಸ್ ಐಟಿ ವಿಚಾರಣೆಯಲ್ಲಿ ಬಂಗ್ಲೆಗುಡ್ಡೆ ಮಹಜರು ಸಂದರ್ಭದಲ್ಲಿ ಮಣ್ಣಿನ ಮೇಲ್ಭಾಗದಲ್ಲೇ ಕಳೇಬರ ಇರುವುದನ್ನು ನೋಡಿದ್ದಾಗಿ ಹೇಳಿರುವ ಹಿನ್ನೆಲೆಯಲ್ಲಿ ಎಸ್ ಐಟಿ ಕಳೇಬರ ಶೋಧಕ್ಕೆ ಮುಂದಾಗಿದೆ.

ಸಂಪೂರ್ಣ ಬಂಗ್ಲೆಗುಡ್ಡೆಯನ್ನು ಶೋಧ ನಡೆಸಲಿರುವ ಎಸ್ಐಟಿ ಅದಕ್ಕಾಗಿ ಪೂರ್ವತಯಾರಿ ಮಾಡಿಕೊಂಡಿದೆ. 13 ಎಕರೆ ವಿಸ್ತೀರ್ಣದಲ್ಲಿರೋ ಬಂಗ್ಲೆಗುಡ್ಡೆ ಕಾಡಿನ ಪೂರ್ತಿ ಶೋಧ ನಡೆಸಲಾಗುತ್ತದೆ ಎಂದು ಮೂಲಗಳು ಹೇಳಿವೆ. ಇದಕ್ಕಾಗಿ ಬಂಗ್ಲೆಗುಡ್ಡೆಯೊಳಗೆ ಪ್ಲಾಸ್ಟಿಕ್ ಪೈಪ್, ಉಪ್ಪು, ಪ್ಲಾಸ್ಟಿಕ್ ಬಾಕ್ಸ್ ಗಳು, ಸೀಲ್ ಮಾಡೋ ಬಟ್ಟೆಗಳು,ಸೀಲ್ ಹಾಕೋ ಮೇಣವನ್ನು ಸಿಬ್ಬಂದಿ ತೆಗೆದುಕೊಂಡು ಹೋಗಿದ್ದಾರೆ.

ಸ್ಥಳದಲ್ಲಿ ಅರಣ್ಯ ಇಲಾಖೆ, SOCO ಟೀಮ್, ಕಂದಾಯ, ಫಾರೆನ್ಸಿಕ್ ಸೇರಿದಂತೆ ಅಧಿಕಾರಿಗಳ ತಂಡ ಬೀಡು ಬಿಟ್ಟಿದೆ. ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶೋಧ ಕಾರ್ಯ ಕೈಗೊಂಡಿದೆ.