ಕುಂದಾಪುರ: ತಲ್ಲೂರು ಮತ್ತು ಜಾಲಾಡಿ ನಡುವಿನ ಎಂಬಾಕ್‌ಮೆಂಟ್ ಪ್ರದೇಶದಲ್ಲಿ ಸೋಮವಾರ(ಸೆ.15) ಸಂಜೆ 6.10ರ ಸಮಯದಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಬೆಂಗಳೂರು ಮೂಲದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗಾಯಗೊಂಡ ವ್ಯಕ್ತಿ ಅಂದಾಜು 50–55 ವರ್ಷ ವಯಸ್ಸಿನವರಾಗಿದ್ದು, ಬೆಂಗಳೂರು ನೋಂದಣಿಯ (KA-09-E-8394) ಯಮಾಹಾ ಆರ್‌ಎಕ್ಸ್ 100 ಬೈಕಿನಲ್ಲಿ ಬೈಂದೂರು ದಿಕ್ಕಿನಿಂದ ಕುಂದಾಪುರ ಕಡೆಗೆ ಪ್ರಯಾಣಿಸುತ್ತಿದ್ದರು. ಸಂಜೆ ಮಳೆಯಿಂದ ರಸ್ತೆ ಜಾರುವಂತಿದ್ದುದು ಅಪಘಾತಕ್ಕೆ ಕಾರಣವಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.
ಅಪಘಾತದ ನಂತರ, ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಇತರ ವಾಹನ ಚಾಲಕರು ತಕ್ಷಣ ಸ್ಪಂದಿಸಿ, ಗಾಯಾಳು ಬೈಕ್ ಸವಾರನನ್ನು ಅಂಬ್ಯುಲನ್ಸ್ ತರಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರು ಘಟನೆಯ ವಿವರಗಳನ್ನು ದಾಖಲಿಸಿ ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.