ಸುರತ್ಕಲ್:ಭ್ರಾಮರಿ ಗ್ರೂಪ್ ಮತ್ತು ಕುಳಾಯಿ ಮಹಿಳಾ ಮಂಡಲದ ಜಂಟಿ ಆಶ್ರಯದಲ್ಲಿ ಸ್ವದೇಶಿ ಸಂಭ್ರಮ ಮಹಿಳಾ ಮತ್ತು ಸಣ್ಣ ಉದ್ದಿಮೆದಾರರಿಂದ ಬೃಹತ್ ಮಾರಾಟ ಮತ್ತು ಪ್ರದರ್ಶನ ಮೇಳ ಕುಳಾಯಿ ಮಹಿಳಾ ಮಂಡಲದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಣ್ಣ ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷ ಎಂ.ಜೆ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸ್ವದೇಶಿ ವಸ್ತುಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಮಹಿಳಾ ಮಂಡಳಿ ಆಯೋಜಿಸುತ್ತಿರುವ ಕಾರ್ಯ ಅಭಿನಂದನೀಯ, ಮಹಿಳೆಯರ ಸ್ವಉದ್ಯೋಗಕ್ಕೆ ಪ್ರೋತ್ಸಾಹಿಸಿ ಎಂದರು.
ಮುಖ್ಯ ಅತಿಥಿಗಳಾಗಿ ಮಾಜೀ ಕಾರ್ಪೊರೇಟರ್ ಗಳಾದ ಅಶೋಕ್ ಶೆಟ್ಟಿ, ವೇದಾವತಿ, ಕುಳಾಯಿ ಶ್ರೀ ಗಣೇಶೋತ್ಸವ ಸಮಿತಿಯ ವಿಠಲ್ ಸಾಲ್ಯಾನ್, ಮಹಿಳಾ ಮಂಡಲದ ಅಧ್ಯಕ್ಷೆ ರೇವತಿ ನವೀನ್, ಯೋಗೀಶ್ ಸನಿಲ್ ಕುಳಾಯಿ, ಕಾರ್ಯಕ್ರಮ ಸಂಘಟಕರಾದ ವಸಂತ್ ಕುಮಾರ್ ತೋಕೂರು,ರೇಖಾ ಶೆಟ್ಟಿ,ಸುಜನಾ ಶೆಟ್ಟಿ ಮುಲ್ಕಿ ಮತ್ತಿತರರು ಉಪಸ್ಥಿತರಿದ್ದರು.
ಸುಧಾ ಪ್ರಹ್ಲಾದ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸೆಪ್ಟಂಬರ್ 12, 13, 14 ರ ಶುಕ್ರವಾರದಿಂದ ಭಾನುವಾರದ ವರೆಗೆ ಕರಕುಶಲ ವಸ್ತುಗಳು, ಸ್ವದೇಶಿ ಖಾದಿ ಬಟ್ಟೆಗಳು, ವಸ್ತ್ರಾಭರಣಗಳು, ಗೃಹೋಪಯೋಗಿ ವಸ್ತುಗಳು, ತಿಂಡಿ ತಿನಸುಗಳು ಲಭ್ಯವಿದೆ. ಪ್ರದರ್ಶನ ಸಂದರ್ಶಿಸಿದ ಎಲ್ಲರಿಗೂ ಲಕ್ಕಿ ಡ್ರಾದಲ್ಲಿ ಭಾಗವಹಿಸುವ ಅವಕಾಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ